ಚೆಸ್ ತರಬೇತಿ ಬೇಸಿಗೆ ಶಿಬಿರ…!

ತುಮಕೂರು:

     ಚೆಸ್ ಅಕಾಡೆಮಿ ಹಾಗು ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆ ಜಂಟಿ ಆಶ್ರಯದಲ್ಲಿ ಏಪ್ರಿಲ್ 5ರಿಂದ ಏಪ್ರಿಲ್ 28ರವರೆಗೆ ಭಾರತೀಯ ಮೂಲದ ಚದುರಂಗ ಆಟವನ್ನು ನಿಯಮ ಅನುಸಾರವಾಗಿ ತರಬೇತಿಯನ್ನು ಜಿಲ್ಲೆಯ ಏಕೈಕ ಫಿಡೆ (ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ) ಪ್ರಮಾಣೀಕರಿಸಲಾಗಿರುವ ತರಬೇತುದಾರರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ .

    ಆರಂಭಿಕ ಹಂತದಿಂದ ಹಿಡಿದು ಉನ್ನತ ಮಟ್ಟದವರೆಗೂ ಚೆಸ್ ಆಟದ ಇತಿಹಾಸ ಹಾಗು ಚೆಸ್ ಆಟದ ಕೌಶಲ್ಯತೆ ಗಳನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪ್ರೊಜೆಕ್ಟರ್ ಬಳಸಿ ವಿದ್ಯಾರ್ಥಿಗಳ ಏಕಾಗ್ರತೆ, ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿ ಬೆಳೆಯಲು ಸಹಕಾರಿಯಾಗುವಂತೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಕುರಿತು ಪೂರ್ವ ಸಿದ್ದತೆ ಹಾಗು ಆಟದ ಮನೋವಿಜ್ಞಾನ ಹೇಳಿ ಕೊಡಲಾಗುತ್ತದೆ,

    ತರಬೇತಿಯ ಸಮಯ ಬೆಳಿಗ್ಗೆ 9:30ಯಿಂದ 11:30 ಹಾಗು 11:30 ಯಿಂದ 1:30ವರಗೆ ಎರಡು ಬ್ಯಾಚುಗಳಲ್ಲಿ ನಡೆಸಲಾಗುತ್ತದೆ ಹಾಗು ಶಿಬಿರಕ್ಕೆ ನೋಂದಣಿಗೊಂಡ ಎಲ್ಲಾ ಆಟಗಾರರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಚೆಸ್ ಸೆಟ್, ಅಕಾಡೆಮಿಯಿಂದ ಪ್ರಕಟಣೆಯಾದ ಚೆಸ್ ಪುಸ್ತಕ ಹಾಗು ವಿಶ್ವಪ್ರಖ್ಯಾತ ಚೆಸ್ ಸಾಫ್ಟ್ ವೆರ್ ಗಳನ್ನೂ ನೀಡಲಾಗುವುದು.ಗ್ರಾಮೀಣ ಪ್ರದೇಶದ ಮಕ್ಕಳಿಗೆ ರಿಯಾಯಿತಿ ನೀಡಲಾಗುತ್ತದೆ . ಹೆಚ್ಚಿನ ಮಾಹಿತಿಗೆ ತುಮಕೂರು ಚೆಸ್ ಅಕಾಡೆಮಿ ಪ್ರಜಾಪ್ರಗತಿ ಕಟ್ಟಡ, ಜೈನ ಭವನ ಎದುರು ಅಥವಾ ಮೊಬೈಲ್ ಸಂಖ್ಯೆ 8050244338 ಸಂಪರ್ಕಿಸಲು ಕೋರಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link