ಚಿತ್ರಮಂದಿರದಲ್ಲಿನ ತಂಬಾಕು ಜಾಹಿರಾತು : ಸುನಿತಾ ಬದಲು ಓಂಪ್ರಕಾಶ್‌ ಕಥೆ…!

ಬೆಂಗಳೂರು :

    ‘ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಒಳ್ಳೆಯ ಗಂಡ, ಎರಡು ಮುದ್ದಿನ ಮಕ್ಕಳು. ಆದರೆ, ತಂಬಾಕು ಎಲ್ಲವನ್ನೂ ಕೆಡಿಸಿಬಿಡ್ತು. ಈಗ ಹರಡುತ್ತಿರುವ ಈ ಕ್ಯಾನ್ಸರ್​ನ ನನ್ನ ಮುಖದಿಂದ ಕತ್ತರಿಸಿ ತೆಗಿಯಬೇಕಾಗಿದೆ. ಇನ್ನು ಯಾವುದೂ ಮೊದಲಿನ ಥರ ಇರಕ್ಕಾಗಲ್ಲ.

    ತಂಬಾಕು ನನ್ನ ಬದುಕನ್ನೇ ಸರ್ವನಾಶ ಮಾಡಿಬಿಡ್ತು’ ಎಂಬ ಲೈನ್​ಗಳನ್ನು ನಿಮಗೆ ತುಂಬಾ ಚಿರಪರಿಚಿತವೇ ಆಗಿರುತ್ತದೆ. ಥಿಯೇಟರ್​ಗೆ ಹೋದಾಗ ಈ ಜಾಹೀರಾತು ಕಾಣಿಸುತ್ತದೆ. ಆದರೆ, ಈಗ ಜಾಹೀರಾತು ಬದಲಾಗಿದೆ. ಈ ಅಡ್ವಟೈಸ್​ಮೆಂಟ್​ನ ಇನ್ಮುಂದೆ ಥಿಯೇಟರ್​ನಲ್ಲಿ ಕಾಣ ಸಿಗುವುದಿಲ್ಲ.

   ಧೂಮಪಾನದ ಜಾಹೀರಾತಲ್ಲೂ ಬದಲಾವಣೆ ಆಗಿದೆ. ಸಿಗರೇಟ್ ಸೇದುವುದನ್ನು ಬಿಡುವುದರಿಂದ ಆರೋಗ್ಯದಲ್ಲಿ ಏನೆಲ್ಲಾ ಚೇತರಿಕೆಯಾಗುತ್ತದೆ ಎಂಬ ಹೊಸ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಜಾಹೀರಾತು ಶುಕ್ರವವಾರದಿಂದ (ಆಗಸ್ಟ್ 23) ಪ್ರದರ್ಶನ ಕಾಣುತ್ತಿದೆ.
   ಸಿನಿಮಾ ಪ್ರದರ್ಶನಕ್ಕೂ ಮೊದಲು, ಮಧ್ಯಂತರದಲ್ಲಿ ಈ ರೀತಿ ಜಾಹೀರಾತು ತೋರಿಸುವುದರಿಂದ ಕಿರಿಕಿರಿ ಆಗುತ್ತದೆ ಎಂದು ಕೆಲವರು ಹೇಳಿಕೊಂಡಿದ್ದೂ ಇದೆ. ಕೆಲವರು ಕೋರ್ಟ್​ನಲ್ಲಿ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು. ಆದರೆ, ಈ ರೀತಿಯ ಜಾಹೀರಾತನ್ನು ಪ್ರದರ್ಶಿಸಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.

Recent Articles

spot_img

Related Stories

Share via
Copy link
Powered by Social Snap