ಹುಳಿಯಾರಿನಲ್ಲೂ ಬ್ಯಾಂಕ್ ಮುಷ್ಕರಕ್ಕೆ ಬೆಂಬಲ

ಹುಳಿಯಾರು:

ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಮುಷ್ಕರ ಬೆಂಬಲಿಸಿ ಹುಳಿಯಾರಿನಲ್ಲೂ ಗುರುವಾರ ಬ್ಯಾಂಕ್ ಮುಚ್ಚಲಾಗಿತ್ತು.

ಚಳಿಕಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕಾನೂನುಗಳ ಮಸೂದೆ 2021 ಅನ್ನು ಪರಿಚಯಿಸುತ್ತಿದೆ. ಎರಡು ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಖಾಸಗೀಕರಣಗೊಳಿಸುವುದು, ಬ್ಯಾಂಕಿಗ್ ಕಂಪನಿಗಳ ಕಾಯ್ದೆಗಳಲ್ಲಿ ತಿದ್ದುಪಡಿಗಳನ್ನು ಮಾಡುವುದು, 1970 ಮತ್ತು 1980 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ. ಇದರ ವಿರುದ್ಧ ಮುಷ್ಕರ ನಡೆಸಲಾಗುತ್ತಿದೆ.

ಮುಷ್ಕರ ಬೆಂಬಲಿಸಿ ಬ್ಯಾಂಕ್ ಮುಚ್ಚಿದ್ದರಿಂದ ಗ್ರಾಹಕರಿಗೆ ಭಾರಿ ತೊಂದರೆಯಾಗಿತ್ತು. ಚಿನ್ನಾಭರಣ ಸಾಲ ಸಿಗದೆ ಖಾಸಗಿ ಬ್ಯಾಂಕ್ ಹಾಗೂ ಗಿರವಿ ಅಂಗಡಿಗಳಲ್ಲಿ ಗಿರವಿ ಇಟ್ಟು ಸಾಲ ಪಡೆದರು. ಹಳ್ಳಿಯಿಂದ ಬಂದ ಗ್ರಾಹಕರು ಗ್ರಾಹಕರ ಸೇವಾ ಕೇಂದ್ರದಲ್ಲಿ ಹಣ ಪಡೆಯಲು ಮತ್ತು ಕಟ್ಟಲು ಮುಂದಾಗಿದ್ದರಿಂದ ಜನಸಂದಣೆ ಹೆಚ್ಚಾಗಿತ್ತು. ಮಧ್ಯಾಹ್ನದೊಳಗೆ ಎಟಿಎಂಗಳಲ್ಲಿ ಹಣ ಖಾಲಿಯಾಗಿ ಸಿಎಚ್‍ಸಿ ಸೆಂಟರ್‍ಗಳ ಕಡೆ ಗ್ರಾಹಕರು ಮುಖ ಮಾಡಿದರು. ಬಹುಮುಖ್ಯವಾಗಿ ಗುರುವಾರ ಪಟ್ಟಣದಲ್ಲಿ ವಾರದ ಸಂತೆ ನಡೆಯುವುದರಿಂದ ಸಹಜವಾಗಿಯೇ ಸಂತೆ ಜೊತೆ ಬ್ಯಾಂಕ್ ವ್ಯವಹಾರಕ್ಕೆ ಬಂದಿದ್ದ ಗ್ರಾಹಕರಿಗೆ ಸೇವೆ ಸಿಗಾದೆ ನಿರಾಸೆಯಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap