ಸುಪ್ರೀಂಕೋರ್ಟ್​ಗೆ ಹೋಗಿದ್ದಾರೆ, ಮುಂದೆ ಇಡೀ ದೇಶದಲ್ಲಿ ಹಿಜಾಬ್ ರದ್ದಾಗಬಹುದು: ರಘುಪತಿ ಭಟ್

ಬೆಂಗಳೂರು:

   ಸುಪ್ರೀಂಕೋರ್ಟ್ ಸಹ ಇವರ ವಿರುದ್ಧ ತೀರ್ಪು ಕೊಟ್ಟರೆ, ಇಡೀ ದೇಶದಲ್ಲೇ ಹಿಜಾಬ್ ರದ್ದಾದರೆ ಇವರೇ ಕಾರಣರಾಗುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

      ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್, ಸುಪ್ರೀಂಕೋರ್ಟ್ ಸಹ ಇವರ ವಿರುದ್ಧ ತೀರ್ಪು ಕೊಟ್ಟರೆ, ಇಡೀ ದೇಶದಲ್ಲೇ ಹಿಜಾಬ್ ರದ್ದಾದರೆ ಇವರೇ ಕಾರಣರಾಗುತ್ತಾರೆ ಎಂದರು.

    ಸರ್ಕಾರದ ಸಮವಸ್ತ್ರ ಪಾಲನೆ ನಿಯಮವನ್ನು ಸಹ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ. ತೀರ್ಪು ಕೊಟ್ಟ ನ್ಯಾಯಾಧೀಶರ ಕೆಲಸದ ಅನುಭವದಷ್ಟೂ ಈ ವಿದ್ಯಾರ್ಥಿನಿಯರಿಗೆ ವಯಸ್ಸಾಗಿಲ್ಲ ಎಂದರು.

ಈ ಹಿಂದೆ ಪರೀಕ್ಷೆಗೆ ಗೈರಾಗಿದ್ದವರಿಗೆ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಹಿಜಾಬ್ ತೆಗೆದು ಬಂದ ವಿದ್ಯಾರ್ಥಿನಿಯರಿಗೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಯಾವುದೇ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡುವ ಪ್ರಶ್ನೆಯೇ ಇಲ್ಲ.

ಆದರೆ ನಿಯಮ ಪಾಲಿಸದವರಿಗೆ ತರಗತಿಗಳಿಗೆ ಪ್ರವೇಶ ಕೊಡುವುದಿಲ್ಲ ಅಷ್ಟೇ. ಒಂದೂವರೆ ವರ್ಷ ಹಿಜಾಬ್ ತೆಗೆದಿಟ್ಟಿದ್ದವರು ಈಗ ಹಿಜಾಬ್ ಬೇಕು ಎನ್ನುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಎಲ್ಲ ಶಾಲಾ ಕಾಲೇಜುಗಳು ಪಾಲಿಸಬೇಕು ಎಂದರು.

 

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link