ನ್ಯಾಯಾಧೀಶೆಯರ ವಜಾಕ್ಕೆ ಮಧ್ಯಪ್ರದೇಶ ಹೈಕೋರ್ಟ್‌ಗೆ ‘ಸುಪ್ರೀಂ’ ತರಾಟೆ

ನವದೆಹಲಿ: 

    ಮಧ್ಯಪ್ರದೇಶದ ನ್ಯಾಯಾಧೀಶೆಯ ವಜಾಗೊಳಿಸುವಿಕೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯದಲ್ಲಿ ಮಹಿಳಾ ಸಿವಿಲ್ ನ್ಯಾಯಾಧೀಶರ ಸೇವೆಯನ್ನು ವಜಾಗೊಳಿಸಿದ್ದಕ್ಕಾಗಿ ಮತ್ತು ಕೆಲವು ನ್ಯಾಯಾಧೀಶೆಯರನ್ನು ಮರುನೇಮಕ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಮಧ್ಯ ಪ್ರದೇಶ ಹೈಕೋರ್ಟ್ ನ್ನು ತೀವ್ರ ತರಾಟಗೆ ತೆಗೆದುಕೊಂಡಿದೆ.

   ಪುರುಷರಿಗೆ ಋತುಮತಿಯಾಗುವ ಪ್ರಾಕೃತಿಕ ಪ್ರಕ್ರಿಯೆ ಇರುತ್ತಿದ್ದರೆ ಅವರು ಅರ್ಥಮಾಡಿಕೊಳ್ಳುತ್ತಿದ್ದರು ಎಂದು ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಪರೋಕ್ಷವಾಗಿ ಮಧ್ಯ ಪ್ರದೇಶ ಹೈಕೋರ್ಟ್‌ನ ಕೊರತೆಯ ವರ್ತನೆಯನ್ನು ಉಲ್ಲೇಖಿಸಿ ಹೇಳಿದೆ. ರಾಜ್ಯದಲ್ಲಿ ಮಹಿಳಾ ಸಿವಿಲ್ ನ್ಯಾಯಾಧೀಶರ ಸೇವೆಗಳು ಮತ್ತು ಅವರಲ್ಲಿ ಕೆಲವರನ್ನು ಮರುಸ್ಥಾಪಿಸಲು ನಿರಾಕರಿಸಿದರು.

    ವಿಶೇಷವಾಗಿ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದರೆ, ಅವರು ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಹೇಳಿ ಮನೆಗೆ ಕಳುಹಿಸಬೇಡಿ. ಪುರುಷ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಅದೇ ಮಾನದಂಡವಿರಲಿ, ಆಗ ಏನಾಗುತ್ತದೆ ಎಂದು ನೋಡೋಣ. ಜಿಲ್ಲಾ ನ್ಯಾಯಾಂಗವನ್ನು ಹೇಗೆ ಗುರಿಯಾಗಿರಿಸುತ್ತೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿ ನಾಗರತ್ನ ಅವರು ಮುಂದಿನ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ನಿಗದಿಪಡಿಸಿದರು.

    ಜೂನ್ 2023 ರಲ್ಲಿ ಮಧ್ಯಪ್ರದೇಶ ಸರ್ಕಾರವು ಆರು ನ್ಯಾಯಾಧೀಶೆಯರ ವಜಾಗೊಳಿಸಿದ ಪ್ರಕರಣ ಕುರಿತು ಈ ವರ್ಷದ ಜನವರಿಯಲ್ಲಿ ಸ್ವಯಂ ಪ್ರೇರಿತವಾಗಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.ಇದಕ್ಕೂ ಮೊದಲು ಜುಲೈ 23, 2024 ರಂದು, ಸುಪ್ರೀಂ ಕೋರ್ಟ್‌ನ ಅದೇ ಪೀಠವು ಮಧ್ಯಪ್ರದೇಶ ಹೈಕೋರ್ಟ್‌ಗೆ ನ್ಯಾಯಾಂಗ ಅಧಿಕಾರಿಗಳ ಸೇವೆಯನ್ನು ವಜಾಗೊಳಿಸುವ ತನ್ನ ನಿರ್ಧಾರವನ್ನು ಒಂದು ತಿಂಗಳೊಳಗೆ ಮರುಪರಿಶೀಲಿಸುವಂತೆ ಸೂಚಿಸಿತ್ತು.

    ಸರಿತಾ ಚೌಧರಿ, ಪ್ರಿಯಾ ಶರ್ಮಾ, ರಚನಾ ಅತುಲ್ಕರ್ ಜೋಷಿ, ಅದಿತಿ ಕುಮಾರ್ ಶರ್ಮಾ, ಸೋನಾಕ್ಷಿ ಜೋಶಿ ಮತ್ತು ಜ್ಯೋತಿ ಬರ್ಖಾಡೆ ಮಧ್ಯಪ್ರದೇಶ ಸರ್ಕಾರದಿಂದ ವಜಾಗೊಂಡಿರುವ ಆರು ಮಹಿಳಾ ನ್ಯಾಯಾಧೀಶೆಯರಾಗಿದ್ದಾರೆ.

Recent Articles

spot_img

Related Stories

Share via
Copy link