ಲಿವ್ ಇನ್ ರಿಲೇಷನ್‌ ಷಿಪ್‌ ನೋಂದಣಿ : ಅರ್ಜಿ ವಜಾ ಮಾಡಿದ ಸುಪ್ರೀಂ

ನವದೆಹಲಿ

     ಲಿವ್ ಇನ್ ರಿಲೇಷನ್‌ ಷಿಪ್‌ ನಲ್ಲಿರುವ ಜೋಡಿಗಳ ನೋಂದಣಿಗೆ ನಿಯಮಾವಳಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ .

   ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರ  ನೇತೃತ್ವದ ನ್ಯಾಯಪೀಠವು ‘ನೀವು ಅಂತಹ ಜನರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಬಯಸುತ್ತೀರಾ ಅಥವಾ ಲಿವ್-ಇನ್ ಸಂಬಂಧಗಳಲ್ಲಿ ಇರಬಾರದು ಎಂದು ಬಯಸುತ್ತಿರುವಿರಾ? ಎಂದು ಅರ್ಜಿದಾರ ಪರ ಹಾಜರಾಗಿದ್ದ ವಕೀಲೆ ಮಮತಾ ರಾಣಿ ಅವರನ್ನು ಪ್ರಶ್ನಿಸಿತು. 

   ಈ ಆರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ಹೇಳಿದೆ.

    ಲಿವ್-ಇನ್ ಪಾರ್ಟ್ನರ್‌ನಿಂದ ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳ ಹೆಚ್ಚಳವನ್ನು ಉಲ್ಲೇಖಿಸಿ ಲಿವ್-ಇನ್ ಸಂಬಂಧಗಳ ನೋಂದಣಿಗೆ ನಿಯಮಗಳನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನವನ್ನು ಕೋರಿ ರಾಣಿ ಅವರು ಪಿಐಎಲ್ ಸಲ್ಲಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap