ನವದೆಹಲಿ
ಕೆಲ ದಿನಗಳ ಹಿಂದೆ ಅಮಾನುಶವಾಗಿ ಹತ್ಯೆಗೀಡಾದ ವಿಚಾರಣಾಧೀನ ಆರೋಪಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರ ಹತ್ಯೆಗಳ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಒಪ್ಪಿಕೊಂಡಿದೆ. ಏಪ್ರಿಲ್ 24 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ನಡೆದಿರುವ ನ್ಯಾಯಾಂಗೇತರ ಹತ್ಯೆಗಳ ಬಗ್ಗೆಯೂ ತನಿಖೆ ನಡೆಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಶನಿವಾರ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಪತ್ರಕರ್ತರಂತೆ ನಟಿಸಿದ ಮೂವರು ವ್ಯಕ್ತಿಗಳು ಅಹ್ಮದ್ ಮತ್ತು ಅಶ್ರಫ್ ಅವರ ಮೇಲೆ ಗುಂಡಿನ ದಾಳಿ ಮಾಡಿದರು. ಘಟನೆಯಲ್ಲಿ ಅಹ್ಮದ್ ಮತ್ತು ಅಶ್ರಫ್ ಮೃತಪಟ್ಟಿದ್ದು, ಮೂವರನ್ನು ಬಂಧಿಸಲಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆರು ವರ್ಷಗಳ ಆಡಳಿತದಲ್ಲಿ ಅಸದ್ ಮತ್ತು ಅವರ ಸಹಚರರು ಸೇರಿದಂತೆ 183 ಕ್ರಿಮಿನಲ್‌ಗಳನ್ನು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಅಹ್ಮದ್ ಮತ್ತು ಆತನ ಸಹೋದರನನ್ನು ಹತ್ಯೆ ಮಾಡಿದ ಮೂವರು ಹಂತಕರನ್ನು ಪೊಲೀಸರು ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂದು ಗುರುತಿಸಿದ್ದಾರೆ. ದಾಳಿಕೋರರು ಇಪ್ಪತ್ತರ ಹರೆಯದವರಾಗಿದ್ದು ಪೋಲೀಸರಿಂದ ತಪ್ಪಿಸಿಕೊಳ್ಳುವ ಮೊದಲು “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ