ನವದೆಹಲಿ:
ದೇಶದ ಸರ್ವೋಚ್ಚ ನ್ಯಾಯಾಲಯ ಅಥವಾ ಸುಪ್ರೀಂ ಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನೇ ಕಿಡಿಗೇಡಿಗಳು ಶುಕ್ರವಾರ ಹ್ಯಾಕ್ ಮಾಡಿದ್ದಾರೆ.
ಖದೀಮರು ದೇಶದ ಸರ್ವೋಚ್ಚ ನ್ಯಾಯಾಲಯದ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿ ಇಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಇತರ ಪ್ರಮೋಶನ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ತಾಂತ್ರಿಕ ತಂಡ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ತಾತ್ಕಾಲಿಕ ಸ್ಥಗಿತಗೊಳಿಸಿ ಸರಿಪಡಿಸುವ ಕಾರ್ಯ ಆರಂಭಿಸಿದೆ.
ಸುಪ್ರೀಂ ಕೋರ್ಟ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ವಿಚಾರಣೆಗಳ ನೇರ ಪ್ರಸಾರ ಮಾಡುತ್ತದೆ. ಇತ್ತೀಚೆಗೆ ಕೋಲ್ಕತಾ ಆರ್‌ಜಿ ಕಾರ್ ಆಸ್ಪತ್ರೆ ಪ್ರಕರಣದ ವಿಚಾರಣೆಯನ್ನು ನೇರ ಪ್ರಸಾರ ಮಾಡಿತ್ತು. ಇನ್ನು ವಿಚಾರಣೆಗಳ ವಿಡಿಯೋಗಳು ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.
ಆದರೆ ಖದೀಮರು ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ ಬಳಿಕ ಅಮೆರಿಕದ ಮೂಲದ ರಿಪ್ಪಲ್ ಲ್ಯಾಬ್ಸ್ ಜಾಹೀರಾತು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೈಕಿ ಕ್ರಿಪ್ಟೋಕರೆನ್ಸಿ, ಎಕ್ಸ್ಆರ್‌ಪಿ ಸೇರಿದಂತೆ ಇತರ ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ರಿಪ್ಪಲ್ ಲ್ಯಾಬ್ಸ್ ವಿಡಿಯೋಗಳನ್ನು ಎಲ್ಲೆಡೆ ಪೋಸ್ಟ್ ಮಾಡುತ್ತಿರುವ ಕುರಿತು ಇತ್ತೀಚೆಗೆ ಯೂಟ್ಯೂಬ್ ವಿರುದ್ಧವೇ ಕಾನೂನು ಹೋರಾಟ ಆರಂಭಿಸಲಾಗಿತ್ತು. ಹಲವು ಹ್ಯಾಕರ್ಸ್ ತಮ್ಮ ಚಾನೆಲ್ ವಿಡಿಯೋಗಳನ್ನು ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡುತ್ತಿರುವ ಕುರಿತು ದೂರು ನೀಡಲಾಗಿದೆ.