ನವದೆಹಲಿ:
ಇತ್ತೀಚೆಗೆ ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಅಬಕಾರಿ ಹಗರಣದಲ್ಲಿ ಇ.ಡಿ.ಯಿಂದ ವಿಚಾರಣೆ ಎದುರಿಸುತ್ತಿರುವ ಕೆಸಿಆರ್ ಪುತ್ರಿ ಹಾಗೂ ಎಂಎಲ್‌ಸಿ ಕೆ.ಕವಿತಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಈ ಸಂಬಂಧ ಮಾತನಾಡಿದ ಅವರು ಕೇಂದ್ರ ಸರ್ಕಾರ ನಮ್ಮ ಹಾಗೂ ಅವರ ವಿರುದ್ಧ ಧ್ವನಿ ಎತ್ತಿದವರ ಮೇಲೆ ಇಡಿ ಮತ್ತು ಸಿ ಬಿ ಐ ಮೂಲಕ ಕೇಸ್ ದಾಖಲಿಸಿ ಅವರ ಧ್ವನಿ ಅಡಗಿಸುವ ತಂತ್ರವಾಗಿಸಿ ಕೊಂಡಿದೆ ಎಂದು ಕವಿತ ಗುಡುಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಜಾರಿ ನಿರ್ದೇಶನಾಲಯದ ವತಿಯಿಂದ ನಡೆಯುತ್ತಿರುವ ವಿಚಾರಣೆಯೇ ಪ್ರಶ್ನಾರ್ಹ.ಇದರ ಜತೆಗೆ, ಮಹಿಳೆಯನ್ನು ಜಾರಿ ನಿರ್ದೇಶನಾಲಯಕ್ಕೆ ಕರೆಯಿಸಿಕೊಂಡು ವಿಚಾರಣೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ