ಕಾರವಾರ
ಮುರ್ಡೇಶ್ವರ , ಗೋಕರ್ಣಕ್ಕೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಣದ ಕೊರತೆ ಎದುರಾಗಿದ್ದು ಜಲ ಕ್ರೀಡೆಗೆ ನಿರ್ಬಂಧ ಹೇರಲು ಪ್ರವಾಸೋದ್ಯಮ ಇಲಾಖೆ ನಿರ್ಧಾರ ಮಾಡಿದೆ. ಪ್ರವಾಸೋದ್ಯಮ ಇಲಾಖೆಯ ಎಡವಟ್ಟಿನ ನಿರ್ಧಾರದಿಂದ ಪ್ರವಾಸಿತಾಣ ಕಳೆಗುಂದಿದೆ. ಗ್ಯಾರಂಟಿ ಯೋಜನೆಯ ಇಫೆಕ್ಟ್ನಿಂದಾಗಿ ಪ್ರವಾಸಿಗರ ರಕ್ಷಣೆಗೆ ಹಣದ ಕೊರತೆ ಎದುರಾಗಿದೆ. ಸೂಕ್ತ ಅನುದಾನ ಇಲ್ಲ ಎಂದು ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಪ್ರವಾಸೋದ್ಯಮ ವಿಫಲವಾಗಿದೆ.
ಮುರ್ಡೇಶ್ವರ, ಗೋಕರ್ಣಕ್ಕೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಣದ ಕೊರತೆ ಎದುರಾಗಿದೆ. ನಿತ್ಯ ಗೋಕರ್ಣ, ಮುರ್ಡೇಶ್ವರಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ಬೋಟಿಂಗ್ನಂತಹ ಜಲ ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗಲು ನಿತ್ಯ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಆದ್ರೆ ಈ ರೀತಿ ಆಟ ಆಡುತ್ತಾ ಪ್ರಾಣ ಕಳೆದುಕೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಪ್ರವಾಸೋದ್ಯಮ ಇಲಾಖೆ ಕಾಟಾಚಾರಕ್ಕೆ ಲೈಫ್ ಗಾರ್ಡ್ಗಳನ್ನ ನೇಮಕ ಮಾಡಿದೆ. ಏಕೆಂದರೆ ಲೈಫ್ ಗಾರ್ಡ್ಸ್ ಕೆಲಸ ಮಾಡಲು ಯಾವುದೇ ಸಲಕರಣೆ ಕೊಟ್ಟಿಲ್ಲ.
ರಕ್ಷಣೆಗೆ ಅತ್ಯವಶ್ಯಕವಾಗಿರುವ ಬೋಟ್, ರೋಪ್ ಹಾಗೂ ಜಾಕೇಟನ್ನೂ ಕೊಟ್ಟಿಲ್ಲ. ಯಾವುದೇ ಸಲಕರಣೆ ಕೊಡದೆ ಬೇರೆಯವರಿಂದ ಕಾಡಿ ಬೇಡಿ ರಕ್ಷಣೆ ಮಾಡುವ ಪರಿಸ್ಥಿತಿ ಇದೆ. ಸಲಕರಣೆ ಕೊಡದೆ ಯಾರಾದ್ರೂ ನೀರು ಪಾಲಾಗಿ ಸಾವನಪ್ಪಿದ್ರೆ ನಮಗೆ ಬಂದು ಬೈತಾರೆ. ಬೇರೆಯವರನ್ನ ಕಾಡಿ ಬೇಡಿ ತಗೊಂಡು ಹೋಗುವಷ್ಟರಲ್ಲಿ ನೀರುಪಾಲಾದ ವ್ಯಕ್ತಿ ಸಾವನಪ್ಪಿರ್ತಾನೆ.
ಇನ್ನು ಮತ್ತೊಂದೆಡೆ ಸಲಕರಣೆ ನೀಡಲು ಹಣದ ವ್ಯವಸ್ಥೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು ಕಡಲ ತೀರ ರಕ್ಷಣೆಗೆ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದು ಜಿಲ್ಲಾಧಿಕಾರಿಗಳ ಮನವಿಗೆ ಇದುವರೆಗೂ ಸರ್ಕಾರ ಸ್ಪಂದಿಸಿಲ್ಲ.