ಕಾಂಗ್ರೇಸ್‌ : ಕರ್ನಾಟಕದ ಉಸ್ತುವಾರಿ ವಿರುದ್ಧ ಹೊಗೆ ಆಡ್ತಾ ಇದಿಯಾ ಅಸಮಾಧಾನ ….!

ಬೆಂಗಳೂರು : 

    ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸ್ಥಿತಿ, ಅಧಿಕಾರ ಕಳೆದುಕೊಂಡು ಕುಳಿತಿರುವ ಬಿಜೆಪಿಗಿಂತಲೂ ಕೆಟ್ಟ ರಾಡಿಯಾತ್ತಿದೆ ಎಂದು ಕಾಂಗ್ರೆಸ್ಸಿಗರೇ ನೊಂದು ಹೇಳುತ್ತಿದ್ದಾರೆ. ಕೇವಲ ರಾಜ್ಯಾಧ್ಯಕ್ಷರನ್ನು ಬದಲಿಸಿದ ತಪ್ಪಿಗೆ ಒಳಬೇಗುದಿಯಿಂದ ಇನ್ನೂ ಬೇಯುತ್ತಿರುವ ಬಿಜೆಪಿಯನ್ನೂ ಮೀರಿಸುವಷ್ಟು ಆಂತರಿಕ ತೊಂದರೆಗೆ ಕಾಂಗ್ರೆಸ್ ಸಿಲುಕಿದೆ.

    ಕಾಂಗ್ರೆಸ್ ತನ್ನಲ್ಲಿ ಎಲ್ಲವೂ ಇದ್ದರೂ ಇಲ್ಲದಂತಾಗಿದೆ. ಪಕ್ಷಕ್ಕೆ ಅಪಾರ ಶಾಸಕರ ಬಲ, ಅಧಿಕಾರ, ಜನಪ್ರಿಯತೆ ಎಲ್ಲವೂ ಇದ್ದರೂ ದಿನದಿನಕ್ಕೂ ಆಂತರಿಕ ಸಮಸ್ಯೆಗಳಿಂದಾಗಿ ವರ್ಚಸ್ಸು ನಾಶ ಮಾಡಿಕೊಳ್ಳುವ ಹಾದಿಯತ್ತ ಸಾಗುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಇತ್ತೀಚೆ ಗಿನ ಅನಗತ್ಯ ಬೆಳವಣಿಗೆ ಹಾಗೂ ಷಡ್ಯಂತ್ರ ಎಂದು ಸ್ವತಃ ಕಾಂಗ್ರೆಸ್ ಸಚಿವರು ಮತ್ತು ಹಿರಿಯ ಶಾಸಕರೇ ಹೇಳುತ್ತಿದ್ದಾರೆ.

   ಅಷ್ಟಕ್ಕೂ ಇದಕ್ಕೆ ಎಐಸಿಸಿಯ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರೇ ಕಾರಣ ಎನ್ನುತ್ತಿರುವ ಅವರು, ಇದನ್ನು ಹೀಗೆಯೇ ಬಿಟ್ಟರೆ ಅಪಾಯ ಎಂದು ಆತಂಕಗೊಳ್ಳುತ್ತಿದ್ದಾರೆ. ಹೀಗಾಗಿ ಶೀಘ್ರವೇ ದೆಹಲಿಗೆ ನಿಯೋಗ ತೆರಳಿ ಸುರ್ಜೇವಾಲ ವಿರುದ್ಧ ಪಕ್ಷದ ಹೈಕಮಾಂಡ್‌ಗೆ ದೂರು ಸಲ್ಲಿಸುವುದಕ್ಕೂ ಕೆಲವು ಶಾಸಕರು ಸಿದ್ಧರಾಗಿದ್ದಾರೆ.

   ಅಂದು, ಇಲ್ಲೊಂದು ಅಪಸ್ವರ ಕೇಳುತ್ತಾ ಸುಗಮವಾಗಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ದಲ್ಲಿ ಸುರ್ಜೇವಾಲ ಸುಂಟರಗಾಳಿ ಎಬ್ಬಿಸುವ ಪ್ರಯತ್ನ ನಡೆಸುತ್ತಿದ್ದು, ಇದರಿಂದ ಸರಕಾರಕ್ಕೆ ಮತ್ತು ಕಾಂಗ್ರೆಸ್‌ಗೆ ತೀರಾ ಧಕ್ಕೆಯಾಗಲಿದೆ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಲು ಚಿಂತಿಸಿ ದ್ದಾರೆ. 

   ಇದಕ್ಕೆ ಕೆಲವು ಹಿರಿಯ ಸಚಿವರು, ಕೆಪಿಸಿಸಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಅನೇಕ ನಾಯಕರ ಸಂಪೂರ್ಣ ಬೆಂಬಲವಿದೆ ಎಂದು ಹೇಳಲಾಗುತ್ತಿದೆ. ಆದರೆ ಸುರ್ಜೇವಾಲ ಅವರು ಸರಕಾರ ಮತ್ತು ಪಕ್ಷದಲ್ಲಿರುವ ಅಸಮಾಧಾನದ ಬಗ್ಗೆ ಸೋಮವಾರದಿಂದ ಮೂರನೇ ಸುತ್ತಿನ ಚರ್ಚೆ, ಅಭಿಪ್ರಾಯ ಸಂಗ್ರಹ ನಡೆಸುತ್ತಿದ್ದು, ಇದಾದ ನಂತರ ಪರಿಸ್ಥಿತಿ ನೋಡಿಕೊಂಡು ಸಚಿವರು ಕೂಡ ದೆಹಲಿಗೆ ತೆರಳಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

   ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸಿರುವ ಸಂಭ್ರಮದಲ್ಲಿತ್ತು. ಆಗ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯ ಅಕ್ರಮ ಗಳನ್ನು ಬಹಿರಂಗಗೊಳಿಸಿದರೆ, ಕಾಗವಾಡ ಶಾಸಕ ರಾಜು ಕಾಗೆ ಅನುದಾನ ಕೊರತೆ ಬಗ್ಗೆ ಅಳಲು ತೋಡಿಕೊಂಡಿದ್ದರು.

    ನಂತರ ಅವರಿಬ್ಬರೊಂದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚಿಸಿ ಅನುದಾನ ಸಮಸ್ಯೆಗಳನ್ನು ಸರಿಪಡಿಸಿದ್ದರು. ಅಲ್ಲಿಗೆ ಅಪಸ್ವರಕ್ಕೆ ತೆರೆ ಬಿದ್ದಿತ್ತು. ಆದರೆ ಇದೇ ವಿಚಾರವನ್ನು ಮುಂದಿಟ್ಟು ಕೊಂಡು ಬಂದ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ, ಮತ್ತೆ ಬಿ.ಆರ್.ಪಾಟೀಲ್ ಮತ್ತು ರಾಜು ಕಾಗೆ ಅವರನ್ನು ಕರೆದು ಹಳೇಯದನ್ನು ಕೆದಕಿದರಲ್ಲದೆ, ಇತರ ಶಾಸಕರನ್ನೂ ಕರೆದು ಏನೆ ಸಮಸ್ಯೆಗಳಿವೆ? ಸರಕಾರದಲ್ಲಿ ಏನೇ ಅಸಮಾಧಾನಗಳಿವೆ? ಎನ್ನುವ ಪ್ರಶ್ನೆಗಳನ್ನು ಹಾಕುವ ಮೂಲಕ ಗುಂಡಿ ತೋಡಲಾರಂಭಿಸಿದರು. ಈ ಮೂಲಕ ರಾಜ್ಯದಲ್ಲಿ ನಾಯಕತ್ವ ಸಮಸ್ಯೆ ಇದೆ. ಸಚಿವರ ಅವ್ಯವಹಾರ ಹೆಚ್ಚಾಗಿದೆ. ನಿರ್ಲಕ್ಷ್ಯ ಅಧಿಕವಾಗಿದೆ ಎನ್ನುವ ಸಂದೇಶ ರವಾನಿಸಿದರು ಎಂದು ಶಾಸಕರು ಬೇಸರಗೊಂಡಿದ್ದಾರೆ.

    ಅಷ್ಟಕ್ಕೂ ನಾಯಕತ್ವದ ವಿಚಾರ ತೀರಾ ಬೀದಿಗೆ ಬಂದು ಕಚ್ಚಾಡುವ ಹಂತಕ್ಕೇನೂ ಹೋಗಿರಲಿಲ್ಲ. ಆದರೂ ಈ ಬೆಳವಣಿಗೆ ನಾಯಕತ್ವ ಬದಲಾವಣೆ ಚರ್ಚೆಯನ್ನು ವಿಪರೀತಕ್ಕೆ ಕೊಂಡ್ಯೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳುವಂತಾಗಿತ್ತು. ಆದರೆ ಅವರಿಗೆ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗದೆ ಪ್ರವಾಸ ಹೋದ ಪುಟ್ಟ, ಬಂದ ಪುಟ್ಟ ಕಥೆಯಂತಾಗಿತ್ತು.

    ಇದರ ಮುಂದುವರಿದ ಭಾಗವಾಗಿ ಸಿಎಂ ಸಿದ್ದರಾಮಯ್ಯ ಅವರು ಜುಲೈ 30ರಂದು ಮತ್ತೆ ದೆಹಲಿಗೆ ತೆರಳಿದ್ದಾರೆ. ಇದಕ್ಕೆ ಕೆಲವು ಹಿರಿಯ ಸಚಿವರು, ಕೆಪಿಸಿಸಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಅನೇಕ ನಾಯಕರ ಸಂಪೂರ್ಣ ಬೆಂಬಲವಿದೆ ಎಂದು ಹೇಳಲಾಗುತ್ತಿದೆ. ಆದರೆ ಸುರ್ಜೇವಾಲ ಅವರು ಸರಕಾರ ಮತ್ತು ಪಕ್ಷದಲ್ಲಿರುವ ಅಸಮಾಧಾನದ ಬಗ್ಗೆ ಸೋಮವಾರದಿಂದ ಮೂರನೇ ಸುತ್ತಿನ ಚರ್ಚೆ, ಅಭಿಪ್ರಾಯ ಸಂಗ್ರಹ ನಡೆಸುತ್ತಿದ್ದು, ಇದಾದ ನಂತರ ಪರಿಸ್ಥಿತಿ ನೋಡಿಕೊಂಡು ಸಚಿವರು ಕೂಡ ದೆಹಲಿಗೆ ತೆರಳಲಿzರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

   ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸಿರುವ ಸಂಭ್ರಮದಲ್ಲಿತ್ತು. ಆಗ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯ ಅಕ್ರಮ ಗಳನ್ನು ಬಹಿರಂಗಗೊಳಿಸಿದರೆ, ಕಾಗವಾಡ ಶಾಸಕ ರಾಜು ಕಾಗೆ ಅನುದಾನ ಕೊರತೆ ಬಗ್ಗೆ ಅಳಲು ತೋಡಿಕೊಂಡಿದ್ದರು.

   ನಂತರ ಅವರಿಬ್ಬರೊಂದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚಿಸಿ ಅನುದಾನ ಸಮಸ್ಯೆಗಳನ್ನು ಸರಿಪಡಿಸಿದ್ದರು. ಅಲ್ಲಿಗೆ ಅಪಸ್ವರಕ್ಕೆ ತೆರೆ ಬಿದ್ದಿತ್ತು. ಆದರೆ ಇದೇ ವಿಚಾರವನ್ನು ಮುಂದಿಟ್ಟು ಕೊಂಡು ಬಂದ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ, ಮತ್ತೆ ಬಿ.ಆರ್.ಪಾಟೀಲ್ ಮತ್ತು ರಾಜು ಕಾಗೆ ಅವರನ್ನು ಕರೆದು ಹಳೇಯದನ್ನು ಕೆದಕಿದರಲ್ಲದೆ, ಇತರ ಶಾಸಕರನ್ನೂ ಕರೆದು ಏನೆ ಸಮಸ್ಯೆಗಳಿವೆ? ಸರಕಾರದಲ್ಲಿ ಏನೇ ಅಸಮಾಧಾನಗಳಿವೆ? ಎನ್ನುವ ಪ್ರಶ್ನೆಗಳನ್ನು ಹಾಕುವ ಮೂಲಕ ಗುಂಡಿ ತೋಡಲಾರಂಭಿಸಿದರು. ಈ ಮೂಲಕ ರಾಜ್ಯದಲ್ಲಿ ನಾಯಕತ್ವ ಸಮಸ್ಯೆ ಇದೆ. ಸಚಿವರ ಅವ್ಯವಹಾರ ಹೆಚ್ಚಾಗಿದೆ. ನಿರ್ಲಕ್ಷ್ಯ ಅಧಿಕವಾಗಿದೆ ಎನ್ನುವ ಸಂದೇಶ ರವಾನಿಸಿದರು ಎಂದು ಶಾಸಕರು ಬೇಸರಗೊಂಡಿದ್ದಾರೆ.

   ಅಷ್ಟಕ್ಕೂ ನಾಯಕತ್ವದ ವಿಚಾರ ತೀರಾ ಬೀದಿಗೆ ಬಂದು ಕಚ್ಚಾಡುವ ಹಂತಕ್ಕೇನೂ ಹೋಗಿರಲ್ಲಿಲ. ಆದರೂ ಈ ಬೆಳವಣಿಗೆ ನಾಯಕತ್ವ ಬದಲಾವಣೆ ಚರ್ಚೆಯನ್ನು ವಿಪರೀತಕ್ಕೆ ಕೊಂಡ್ಯೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳುವಂತಾಗಿತ್ತು. ಆದರೆ ಅವರಿಗೆ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗದೆ ಪ್ರವಾಸ ಹೋದ ಪುಟ್ಟ, ಬಂದ ಪುಟ್ಟ ಕಥೆಯಂತಾಗಿತ್ತು. ಇದರ ಮುಂದುವರಿದ ಭಾಗವಾಗಿ ಸಿಎಂ ಸಿದ್ದರಾಮಯ್ಯ ಅವರು ಜುಲೈ 30ರಂದು ಮತ್ತೆ ದೆಹಲಿಗೆ ತೆರಳಿ ದ್ದಾರೆ. 

   ಉಸ್ತುವಾರಿಗಳು ಈತನಕ ಸುಮಾರು 55ಕ್ಕೂ ಹೆಚ್ಚು ಶಾಸಕರ ಜತೆ ಪ್ರತ್ಯೇಕವಾಗಿ ಮಾತನಾಡಿದ್ದು, ಕೆಲವರ ಜತೆ ಅನುದಾನ ಮತ್ತು ಕೆಲಸಗಳ ಬಗ್ಗೆ ಮಾತನಾಡಿದರೆ, ಅನೇಕರಿಂದ ಯಾವ ನಾಯ ಕತ್ವ ಸೂಕ್ತ ಎನ್ನುವ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಶಾಸಕರಲ್ಲಿ ಮನಸ್ಸು ಒಡೆಯುವಂತಾಗಿದ್ದು, ಇದರಲ್ಲಿ ಷಡ್ಯಂತ್ರ ಇರುವ ಶಂಕೆ ಇದೆ. ಇದರಿಂದ ಪಕ್ಷಕ್ಕೆ ಮತ್ತು ಸರಕಾರಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಈ ಮಧ್ಯೆ, ಮೂರನೇ ಸುತ್ತಿನಲ್ಲಿ ಸಚಿವರ ಜತೆ ಚರ್ಚಿಸುವ ಸಾಧ್ಯತೆ ಇರುವುದರಿಂದ ಇನ್ನೂ ಕೆಟ್ಟ ಸಂದೇಶ ರವಾನೆಯಾಗಲಿದೆ ಎಂದು ಕೆಲವು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link