ಯಶ್‌ ಬರ್ತ್‌ಡೇಗೆ ‘ಟಾಕ್ಸಿಕ್‌’ ಸರ್ಪ್ರೈಸ್ ಗಿಫ್ಟ್…….!

ಬೆಂಗಳೂರು: 

   ಸಿನಿ ಪ್ರಿಯರಿಗೆ ರಾಕಿಂಗ್‌ ಸ್ಟಾರ್‌ ಯಶ್‌  ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಟಾಕ್ಸಿಕ್‌  ಚಿತ್ರದ ಟೀಸರ್‌ ಇಂದು ರಿಲೀಸ್‌ ಆಗಿದೆ. ಯಶ್‌ ಜನ್ಮದಿನಕ್ಕೆ ‘ಟಾಕ್ಸಿಕ್‌’ ಸರ್ಪ್ರೈಸ್ ಗಿಫ್ಟ್ ರಿವೀಲ್ ಆಗಿದ್ದು, 59ಸೆಕೆಂಡ್ ಟೀಸರ್‌ನಲ್ಲಿ ರಾಕಿಂಗ್‌ ಸ್ಟಾರ್‌ ಮ್ಯಾನರಿಸಂಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿ‍ದ್ದಾರೆ.

    ಟಾಕ್ಸಿಕ್‌’ನ 59ಸೆಕೆಂಡ್‌ನ ಗ್ಲಿಮ್ಸ್‌ ಔಟ್ ಆಗಿದ್ದು, ಡ್ರಗ್ಸ್ ಮಾಫಿಯಾ ಕುರಿತ ಗ್ಲೋಬಲ್ ಸಿನಿಮಾ ಇದಾಗಿದೆ ಎಂಬುದು ಸ್ಪಷ್ಟವಾಗಿದೆ. ಇನ್ನು ಸ್ಟೈಲಿಶ್ ವಾಕ್, ಹಾಟ್ ಮ್ಯಾನರಿಸಮ್‌ ಲುಕ್‌ನಲ್ಲಿ ಯಶ್‌ ಗಮನ ಸೆಳೆದಿದ್ದಾರೆ. ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ಮೋಜಿನಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಅವರು ಶರಾಬಿನ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಅದನ್ನು ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ. ಸಿಕ್ಕಾಪಟ್ಟೆ ಹೈಪ್‌ ಅನ್ನು ಈ ಒಂದು ಗ್ಲಿಂಪಸ್‌ ಕ್ರಿಯೇಟ್‌ ಮಾಡಿರೋದರಲ್ಲಿ ಅನುಮಾನವೇ ಇಲ್ಲ. ಈ ಗ್ಲಿಂಪ್ಸ್‌ ಸಿನಿಮಾದಲ್ಲಿ ಬರುವ ಒಂದು ಕ್ಲಿಪ್‌ ಎಂದು ಹೇಳಲಾಗುತ್ತಿದೆ.

   ‘ಟಾಕ್ಸಿಕ್‌’ ಯಶ್‌ ನಟನೆಯ 19ನೇ ಸಿನಿಮಾವಾಗಿದ್ದು, 2023ರ ಡಿಸೆಂಬರ್‌ 8ರಂದು ಘೋಷಣೆಯಾಗಿದ್ದ ಈ ಚಿತ್ರದ ಚಿತ್ರೀಕರಣ ಆಗಸ್ಟ್‌ 8ರಂದು ಆರಂಭವಾಗಿತ್ತು. ಬೆಂಗಳೂರಿನ ಎಚ್‌ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ, ನಂತರ ಮುಂಬೈ, ಗೋವಾ, ಮಂಗಳೂರಿನಲ್ಲೂ ಚಿತ್ರೀಕರಣ ನಡೆಸಿದೆ. ಕೆವಿಎನ್‌ ಪ್ರೊಡಕ್ಷನ್ ಹಾಗೂ ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ನಿರ್ಮಾಣ ಮಾಡುತ್ತಿದೆ.

    ರಾಕಿಂಗ್ ಸ್ಟಾರ್ ಯಶ್  ಅವರಿಗೆ ಇಂದು (ಜನವರಿ 8) ಜನ್ಮದಿನದ ಸಂಭ್ರಮ . ಅವರಿಗೆ ಎಲ್ಲ ಕಡೆಗಳಿಂದ ವಿಶ್​ಗಳು ಹರಿದು ಬರುತ್ತಿವೆ. ಯಶ್​ಗೆ ಈಗ ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಎಲ್ಲರೂ ಯಶ್​ಗೆ ಬರ್ತ್​ಡೇ ಶುಭಾಶಯ ತಿಳಿಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಗೆಲುವು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಯಶ್ ಅವರು ಏಕಾಏಕಿ ದೊಡ್ಡ ಸ್ಟಾರ್ ಆದವರಲ್ಲ. ಬಣ್ಣದ ಲೋಕಕ್ಕೆ ಕಾಲಿಡುವಾಗ ಅವರಿಗೆ ಯಾವುದೇ ಹಿನ್ನೆಲೆ ಇರಲಿಲ್ಲ. ಧಾರಾವಾಹಿ ಮೂಲಕ ವೃತ್ತಿಜೀವನ ಆರಂಭಿಸಿದ ಯಶ್ ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ತಮ್ಮ ಸಾಮ್ರಾಜ್ಯವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ವಿಸ್ತರಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link