ಗದಗ:-
ಪ್ರಜ್ವಲ್ ರೇವಣ್ಣ ಅವರದ್ದು, ಎನ್ನಲಾಗಿರುವ ಘಟನೆಗಳು ಸತ್ಯ ಆಗಿದ್ದರೆ, ಅವರು ಆರೋಪಿಯಿಂದ ಅಪರಾಧಿ ಅಂತಾ ಸಾಬೀತಾದ್ರೆ ಬಹಳ ಅಸಹ್ಯಕರವಾದ ಘಟನೆಯಾಗಿದೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ತಾರಾ ಅನುರಾಧಾ ಹೇಳಿದರು.
ಅವರು ಗದಗ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅದು ಯಾವುದೇ ಮಹಿಳೆ ಒಪ್ಪಿಕೊಳ್ಳುವಂತಹ ಅಥವಾ ಗೌರವದಿಂದ ಕೂಡಿರುವಂತಹ ಘಟನೆಗಳು ಅಲ್ಲ ಆದರೆ ಜನತಾದಳ ಪಕ್ಷದಲ್ಲಿ ಅವರು ಉಚ್ಚಾಟನೆ ಮಾಡುತ್ತಿರೋದಾಗಲಿ ಶಿಕ್ಷೆ ಕೊಡೋದಾಗಲಿ ಅದು ಅವರಿಗೆ ಬಿಟ್ಟ ವಿಚಾರ
ಒಬ್ಬ ಮಹಿಳೆ ಆಗಿ, ಬಹಳ ಅಸಹ್ಯ ಅನ್ನೋ ಪ್ರಕರಣ ಅನ್ನೋದು ಸತ್ಯ ಇದರಿಂದ ಮೈತ್ರಿ ಆಗಿರುವ ಕಾರಣ ಬಿಜೆಪಿಗೆ ಪ್ರಜ್ವಲ್ ಪ್ರಕರಣ ಹೊಡೆತ ನೀಡುವದು ಖಂಡಿತ ಇಲ್ಲ ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಎಸ್ ಐ ಟಿ ಗೆ ಕೊಟ್ಟಿದ್ದೇವೆ ಅಂದಿದ್ದಾರೆ ತನಿಖೆ ನಡೀತಿದೆ, ತನಿಖೆ ನಡೆದ ಮೇಲೆ ಸಾಬೀತಾದ್ರೆ ಉಚ್ಚಾಟನೆ ಮಾಡೋದು ಖಂಡಿತ ಅಂದಿದ್ದಾರೆ ಅವರೇ ಆ ರೀತಿ ಹೇಳಿದಾಗ, ಗಟ್ಟಿ ನಿಲುವು ತೆಗೆದುಕೊಂಡಿರುವಾಗ ಬಿಜೆಪಿ ಪಾರ್ಟಿಗೂ,
ಆ ನಿಲುವಿಗೂ, ಘಟನೆಗೂ ಸಂಬಂಧ ಇಲ್ಲ ಒಬ್ಬ ಮಹಿಳೆ ಆಗಿ ಬಹಳ ಅಸಹ್ಯ ಹುಟ್ಟಿಸುವ ಸಂಗತಿ ಅದು ಖಡಾಖಂಡಿತವಾಗಲೂ ಖಂಡಿಸುತ್ತೇವೆ.
ಪ್ರಜ್ವಲ್ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಒಳ್ಳೇದು ಒಳ್ಳೇದು ಒಳ್ಳೇ ವಿಚಾರಗಳಿಗೆ ಪ್ರತಿಭಟನೆ ಮಾಡಿದರೆ ನಾವೂ ಕೂಡಾ ವೆಲ್ಕಮ್ ಮಾಡುತ್ತೇವೆ ಎಂದರು.