ಚಿಕ್ಕಮಗಳೂರು:
ಬೆಂಗಳೂರು ಮೂಲದ ಯುವಕ-ಯುವತಿ ಚಿಕ್ಕಮಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ಕಾರಿನಲ್ಲಿ ಯುವತಿಯ ಮೃತದೇಹ ಬಿದ್ದಿದ್ದರೆ, ಪಕ್ಕದ ಮರದಲ್ಲಿ ಯುವಕನ ದೇಹ ಪತ್ತೆಯಾಗಿದೆ. ಯುವತಿಯನ್ನ ಸಾಯಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಬೆಂಗಳೂರು ನೋಂದಣಿಯ ಯೆಲ್ಲೋ ಬೋರ್ಡ್ ಕಾರಿನಲ್ಲಿ ಇಬ್ಬರು ಬಂದಿದ್ದಾರೆ.
KA 03 AD 4628 ನೋಂದಣಿಯ ಕಾರು ಅದಾಗಿದೆ. ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಇದೆ. ಯುವತಿಯ ವೇಲ್ನಿಂದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಹೀಗಾಗಿ ಪ್ರಕರಣದ ಸುತ್ತ ಅನುಮಾನಗಳು ಶುರುವಾಗಿವೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
