ಚಿತ್ರದುರ್ಗ: ಪರಸ್ತ್ರೀಯೊಂದಿಗೆ ಲಾಡ್ಜ್‌ ಗೆ ಹೋಗಿ ಪರಲೋಕ ಸೇರಿದ ಪತಿರಾಯ….!

ಚಿತ್ರದುರ್ಗ:

   ವಿವಾಹಿತೆ ಪರ ಸ್ತ್ರೀಯ ಜೊತೆಗೆ ಲಾಡ್ಜಿಗೆ ಹೋದ ವಿವಾಹಿತನೊಬ್ಬ ಸಂಶಯಾಸ್ಪದವಾಗಿ  ಸಾವಿಗೀಡಾಗಿದ್ದಾನೆ. ಚಿತ್ರದುರ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಘಟನೆ ನಡೆದಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

   ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ಈತ ವಿವಾಹಿತೆಯಾದ ಪರಸ್ತ್ರೀ ಪವಿತ್ರ ಎಂಬಾಕೆಯೊಂದಿಗೆ ಲಾಡ್ಜ್‌ಗೆ ಬಂದಿದ್ದ. ಪವಿತ್ರ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವಳು. ಕಳೆದ ಒಂದು ವರ್ಷದ ಹಿಂದೆ ಪವಿತ್ರ-ಗೋಪಾಲ ಪರಸ್ಪರ ಪರಿಚಯವಾಗಿದ್ದರು. ಕಳೆದ 6 ತಿಂಗಳಿಂದ‌ ಪರಸ್ಪರ ದೈಹಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

   ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವರನ್ನು ವಿವಾಹವಾಗಿದ್ದ. ಹೆಂಡತಿ ಇದ್ದರೂ ಪರಸ್ತ್ರೀ ಸಹವಾಸ ಬಿಡದ ಗೋಪಾಲ, ಪವಿತ್ರ ಜೊತೆಗೆ ಕಳೆದ ಜುಲೈ 4ರ ಮಧ್ಯಾಹ್ನ 3:11ಕ್ಕೆ ಲಾಡ್ಜ್‌ಗೆ ಬಂದಿದ್ದ. ಅದೇ ರಾತ್ರಿ ಲಾಡ್ಜಿನಲ್ಲೇ ಕುಸಿದು ಬಿದ್ದಿದ್ದ. ರಾತ್ರಿ 7:15ಕ್ಕೆ ಎದೆ ನೋವಿನಿಂದ ಕುಸಿದು ಬಿದ್ದಿದ್ದ ಎಂದು ಪವಿತ್ರ ತಿಳಿಸಿದ್ದಾಳೆ.

   ಗೋಪಾಲ- ಪವಿತ್ರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಗೋಪಾಲ ಕುಟುಂಬ ಹೆಚ್ಚಿನ ತನಿಖೆಗೆ ಆಗ್ರಹಿಸಿದೆ. ಪೊಲೀಸರು ಪವಿತ್ರಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link