ಶಿರಸಿ :
ಸ್ವತಂತ್ರ ಪ್ರಜೆಗಳಾದ ನಾವು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಚಿಕ್ಕದಾದ ಕೊಡುಗೆ ನೀಡಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಬಿ.ಪಿ ಸತೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಶುಕ್ರವಾರ ತಾಲೂಕು ಪಂಚಾಯತ್ 79ನೇ ಸ್ವತಂತ್ರ ಭಾರತದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನಾವು ವಿದೇಶಿ ವಸ್ತುಗಳಿಗೆ ಮಾರುಹೋಗುತ್ತಿದ್ದೇವೆ. ನಮ್ಮಲ್ಲಿನ ಸಂಪನ್ಮೂಲಗಳ ಬಳಕೆಯ ಸದುಪಯೋಗ ಪಡೆದು ಸ್ಥಳೀಯ ಉದ್ಯೋಗಗಳಿಗೆ ಪ್ರಾಮುಖ್ಯತೆ ನೀಡೋಣ ಎಂದರು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚನ್ನಬಸಪ್ಪ ಹಾವಣಗಿ ಮಾತನಾಡಿ ಸ್ವತಂತ್ರ ಎನ್ನುವುದು ಸ್ವೇಚ್ಛಾಚಾರವಲ್ಲ. ಅದು ನಮಗೆ ಸಿಕ್ಕಿರುವ ಅವಕಾಶ. ಉತ್ತಮ ಕೆಲಸಕ್ಕೆ ಬಳಸಿಕೊಳ್ಳೋಣ ಎಂದರು.ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ಲೆಕ್ಕಧಿಕಾರಿಗಳಾದ ಸೀತಾರಾಮ್ ನಾಯ್ಕ, ಯೋಜನಧಿಕಾರಿಗಳಾದ ಅಶೋಕ್ ನಾಯ್ಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರವಿ ಬೆಂಚೆಳ್ಳಿ, ತಾ. ಪಂ ವ್ಯವಸ್ಥಾಪಕರಾದ ಸುಬ್ರಾಯ ಭಟ್, ತಾಲೂಕು ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
