ಸಿಎಂ ಮತ್ತೆ ಡಿಸಿಎಂ ರಾಜೀನಾಮೆಗೆ ಸ್ವಾಮಿ ಆಗ್ರಹ….!

ನಾಯಕನಹಟ್ಟಿ :

    ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣವಾಗಿದ್ದು, ಘಟನೆಯ ನೈತಿಕತೆ ಹೊತ್ತು ತಕ್ಷಣವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಿನಾಮೆ ನೀಡಬೇಕೆಂದು ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಎಂ.ವೈ.ಟಿ ಸ್ವಾಮಿ ಆಗ್ರಹಿಸಿದರು.

    ಪಟ್ಟಣದ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ನಿರ್ಲಕ್ಷö್ಯದಿಂದ ಕಳೆದುಕೊಂಡಿದ್ದು ಮಾತ್ರ ಅಮಾಯಕ ಜನರು, ಈ 11 ಜನರ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಅರೋಪಿಸಿದರು. 35 ವರ್ಷಗಳ ಕಾಲ ರಜೆಯನ್ನು ತೆಗೆದುಕೊಳ್ಳದೆ ಬೆಂಗಳೂರಿನ ಪೊಲೀಸ್ ಆಯುಕ್ತರಾಗಿದ್ದು ಕರ್ತವ್ಯ ನಿರ್ವಹಿಸಿದ ದಯಾನಂದರವರು ಪ್ರಾಮಾಣೀಕ ಪೊಲೀಸ್ ಕಮಿಷನರ್ ಆಗಿದ್ದರು. ಅವರ ಅಮಾನತು ಹಿಂಪಡೆಯಬೇಕೆಂದು ಒತ್ತಾಯಿಸಿದರು.   ರಾಜ್ಯ ಸರ್ಕಾರ ತಮ್ಮ ವೈಪಲ್ಯಗಳನ್ನು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಕ್ರಮ ಸರಿಯಲ್ಲ, ಅವರನ್ನು ಮರು ಕರ್ತವ್ಯ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ದುರ್ಘಟನೆಯ ತಪ್ಪನ್ನು ಪೊಲೀಸ್ ಅಧಿಕಾರಿಗಳ ಮೇಲೆ ಹಾಕಿ ಅವರನ್ನು ಅಮಾನತು ಪಡಿಸಲಾಗಿದೆ. ಈ ಆದೇಶವನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದರು. ಯಾವುದೇ ಮುನ್ಸೂಚನೆ ಹಾಗೂ ಪೊಲೀಸ್ ಅನುಮತಿ ಇಲ್ಲದೆ ಆರ್‌ಸಿಬಿ ವಿಜಯೋತ್ಸವ ಮಾಡಿತು. ಕಾಲ್ತುಳಿತದಲ್ಲಿ 11 ಅಮಾಯಕರ ಜೀವ ಹೋಗಿದೆ ಎಂದು ದುಖಃದಿಂದ ಮಾತನಾಡಿದರು. ಮಾಜಿ ಸಚಿವ ತಿಪ್ಪೇಸ್ವಾಮಿಯವರ ಪುತ್ರ ನೂತನ ಚಿತ್ರದುರ್ಗದ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

Recent Articles

spot_img

Related Stories

Share via
Copy link