ನವದೆಹಲಿ :
ನೇಕ ಜನರು ಜೀವನದಲ್ಲಿ ಸಾಹಸ ಮತ್ತು ಥ್ರಿಲ್ ಬಯಸುತ್ತಾರೆ. ಇದಕ್ಕಾಗಿ ಅನೇಕ ಸಾಹಸ ಕ್ರೀಡೆಗಳನ್ನು ಆಡುತ್ತಾರೆ. ಆದರೆ ಈ ಸಾಹಸ ಚಟುವಟಿಕೆಗಳನ್ನು ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.ಅನೇಕ ಬಾರಿ ಸಣ್ಣ ತಪ್ಪಿನಿಂದ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಇದೀಗ ಅಂತದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಕೈಡೈವಿಂಗ್ ವೇಳೆ ವ್ಯಕ್ತಿಯೊಬ್ಬ ಪರ್ವತದಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಇಡೀ ಘಟನೆ ಸಮೀಪದಲ್ಲಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಫೋನ್ನಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವರ್ಷಗಳಿಂದ ಸ್ಕೈ ಡೈವಿಂಗ್ ತರಬೇತುದಾರಾಗಿ ಕೆಲಸ ಮಾಡುತ್ತಿದ್ದ ಬ್ರೆಜಿಲ್ನ ಜೋಸ್ ಡಿ ಅಲೆಂಕಾರ್ ಲಿಮಾ ಜೂನಿಯರ್ ಎತ್ತರದ ಬೆಟ್ಟದಿಂದ ನೇರವಾಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಬ್ರೆಜಿಲ್ನ ಸಾವೊ ಕಾನ್ರಾಡೊ ಪ್ರದೇಶದಲ್ಲಿ 820 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಲು ತಯಾರಿ ನಡೆಸುತ್ತಿರುವ ವೇಳೆ ಈ ಘಟನೆ ನಡೆದಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಲಿಮಾ ಜಿಗಿಯಲು ಮುಂದಾದ ತಕ್ಷಣ, ಅವರ ಪ್ಯಾರಾಚೂಟ್ ಕಂದಕಕ್ಕೆ ಬಿದ್ದಿದೆ. ಇದೀಗ ಬ್ರೆಜಿಲ್ ಪೊಲೀಸರು ಅವರ ಸ್ಕೈಡೈವಿಂಗ್ ಉಪಕರಣಗಳಲ್ಲಿ ಏನಾದರೂ ದೋಷವಿತ್ತೇ ಎಂದು ತನಿಖೆ ನಡೆಸುತ್ತಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ನೆಟ್ಟಿ್ರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. “ನನ್ನ ಜೀವನದಲ್ಲಿ ನಾನು ಸ್ಕೈ ಡೈವಿಂಗ್ ಮಾಡುವುದಿಲ್ಲ” ಎಂದು ಒಬ್ಬ ಬಳಕೆದಾರರು ಬರೆದರೆ, ಮತ್ತೊಬ್ಬರು ” ಇಂತಹ ಸಾಹಸ ಕ್ರೀಡೆ ನಿಷೇಧಿಸಬೇಕೆಂದು” ಒತ್ತಾಯಿಸಿದ್ದಾರೆ.