ಪಾಕಿಸ್ತಾನದ ವಿರುದ್ಧ ಅಫ್ಘಾನ್‌ ರೆಬೆಲ್‌; ತಾಲಿಬಾನ್‌ನಿಂದ ಖಡಕ್‌ ಎಚ್ಚರಿಕೆ

ಕಾಬೂಲ್‌:

     ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ನಡುವಿನ ಸಮರ ತಾರಕ್ಕೇರಿದೆ. ಅಫ್ಘಾನ್  ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ತಾಲಿಬಾನ್‌  ಪಾಕ್‌ ಪ್ರದೇಶದ ಮೇಲೆ ದಾಳಿ ನಡೆಸಿದೆ. ಪ್ರತೀಕಾರದ ದಾಳಿಯಲ್ಲಿ ಕನಿಷ್ಠ 58 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಭಾನುವಾರ ತಿಳಿಸಿದರು. ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅವರು, ಪಾಕಿಸ್ತಾನವು ತನ್ನ ನೆಲದಿಂದ ಅಡಗಿರುವ ಪ್ರಮುಖ ಐಸಿಸ್ ಸದಸ್ಯರನ್ನು ಹೊರಹಾಕಬೇಕು ಅಥವಾ ಅವರನ್ನು ಇಸ್ಲಾಮಿಕ್ ಎಮಿರೇಟ್‌ಗೆ ಹಸ್ತಾಂತರಿಸಬೇಕು ಎಂದು ಹೇಳಿದ್ದಾರೆ.

    ಐಸಿಸ್ ಗುಂಪು ಅಫ್ಘಾನಿಸ್ತಾನ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಬೆದರಿಕೆಯನ್ನು ಒಡ್ಡುತ್ತದೆ. ಅಫ್ಘಾನಿಸ್ತಾನವು ತನ್ನ ವಾಯು ಮತ್ತು ಭೂ ಗಡಿಗಳನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಮತ್ತು ಯಾವುದೇ ದಾಳಿಯನ್ನು ಉತ್ತರಿಸದೆ ಬಿಡುವುದಿಲ್ಲ. ಪಾಕಿಸ್ತಾನವು ತನ್ನ ನೆಲದಿಂದ ಅಡಗಿರುವ ಪ್ರಮುಖ ಐಸಿಸ್ ಸದಸ್ಯರನ್ನು ಹೊರಹಾಕಬೇಕು ಅಥವಾ ಅವರನ್ನು ಇಸ್ಲಾಮಿಕ್ ಎಮಿರೇಟ್‌ಗೆ ಹಸ್ತಾಂತರಿಸಬೇಕು ಎಂದು ಎಚ್ಚರಿಕೆ ನೀಡಿದರು.

    ಪ್ರತೀಕಾರದ ದಾಳಿಯನ್ನು ಸಮರ್ಥಿಸಿಕೊಂಡ ತಾಲಿಬಾನ್ ವಕ್ತಾರ, , “ಗಮನಾರ್ಹ ಪ್ರಮಾಣದ ಶಸ್ತ್ರಾಸ್ತ್ರಗಳು ಇಸ್ಲಾಮಿಕ್ ಎಮಿರೇಟ್ ಪಡೆಗಳ ಕೈಗೆ ಸಿಕ್ಕವು. ಈ ಘರ್ಷಣೆಗಳಲ್ಲಿ, ಇಸ್ಲಾಮಿಕ್ ಎಮಿರೇಟ್ ಪಡೆಗಳ 20 ಕ್ಕೂ ಹೆಚ್ಚು ಸದಸ್ಯರು ಸಹ ಸಾವನ್ನಪ್ಪಿದ್ದಾರೆ. ಆದರೆ ಪಾಕಿಸ್ತಾನವನ್ನು ಸುಮ್ಮನೆ ಬಿಡೆವು, ತಮ್ಮ ನೆಲದ ಮೇಲೆ ಆಕ್ರಮಣ ಮಾಡುವ ಅಥವಾ ಅವರ ವಾಯುಪ್ರದೇಶವನ್ನು ಉಲ್ಲಂಘಿಸುವ ಯಾರಾದರೂ “ಕಠಿಣ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ” ಎಂದು ಮುಜಾಹಿದ್ ಹೇಳಿದರು. ಕಾಬೂಲ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಪಾಕಿಸ್ತಾನದ ಇತ್ತೀಚಿನ ವೈಮಾನಿಕ ದಾಳಿಗಳಿಗೆ ಪ್ರತಿಯಾಗಿ, ಅಫ್ಘಾನ್ ಪಡೆಗಳು ನಿನ್ನೆ ರಾತ್ರಿ ಹೆಲ್ಮಂಡ್, ಕಂದಹಾರ್, ಜಬುಲ್, ಪಕ್ತಿಕಾ, ಪಕ್ತಿಯಾ, ಖೋಸ್ಟ್, ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಪಾಕಿಸ್ತಾನಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. 

    ಅಕ್ಟೋಬರ್ 9 ರಂದು, ಪಾಕಿಸ್ತಾನವು ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯಗಳಲ್ಲಿ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನ ಹಿರಿಯ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಅಫ್ಘಾನಿಸ್ತಾನ ಈ ದಾಳಿಯನ್ನು ನಡೆಸಿವೆ. ಕತಾರ್ ಹಾಗೂ ಸೌದಿ ವಿದೇಶಾಂಗ ಸಚಿವಾಲಯವು “ಎರಡೂ ಕಡೆಯವರು ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡಬೇಕು, ಸಂಯಮವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿಕೆ ನೀಡಿತ್ತು.

Recent Articles

spot_img

Related Stories

Share via
Copy link