ಅಫ್ಘಾನಿಸ್ತಾನ ಸಚಿವರ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ನಿರ್ಬಂಧ….!

ನವದೆಹಲಿ:

    ಮಹಿಳಾ ಪತ್ರಕರ್ತರಿಗೆ ತಮ್ಮ ಮಾಧ್ಯಮಗೋಷ್ಠಿಗೆ  ನಿರ್ಬಂಧ ಹೇರಿ ಭಾರತೀಯ ಪತ್ರಿಕಾ ಮಾಧ್ಯಮ ಮತ್ತು ವಿಪಕ್ಷಗಳ ಟೀಕೆಗೆ ಗುರಿಯಾದ ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ  ಇದೀಗ ಸ್ಪಷ್ಟನೆ ನಡೆದಿದ್ದು, ಇದು ಉದ್ದೇಶಪೂರ್ವಕವಲ್ಲ, ತಾಂತ್ರಿಕ ಸಮಸ್ಯೆ  ಎಂದು ಹೇಳಿದ್ದಾರೆ.

   ಅ.10ರಂದು ನವದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ತಾಲಿಬಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ, ತಮ್ಮ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರ ಇಟ್ಟಿದ್ದರು. ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರು, ತಮ್ಮ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರ ಪ್ರವೇಶಾತಿಗೆ ನಿರ್ಬಂಧ ವಿಧಿಸಿ ಬಹಳ ಟೀಕೆಗೆ ಒಳಗಾಗಿದ್ದರು. ಭಾರತ-ಅಘ್ಘಾನಿಸ್ತಾನ ರಾಜತಾಂತ್ರಿಕ ಸಂಬಂಧ ಬಲಗೊಳ್ಳುತ್ತಿರುವ ಸಮಯದಲ್ಲಿ ಮುತ್ತಾಕಿ ಅವರ ನಡೆ ದೇಶದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಅಲ್ಲದೇ ಮಹಿಳೆ ಪತ್ರಕರ್ತರ ಮೇಲೆ ಹೇರಿದ್ದ ಈ ನಿಯಮಕ್ಕೆ ಸಂಬಂಧಿಸಿದಂತೆ ಮಾಧ್ಯಮ ಸಂಸ್ಥೆಗಳು ಹಾಗೂ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. 

   ಈ ಘಟನೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಮುತ್ತಕಿ, ”ನಾವು ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಟ್ಟಿಲ್ಲ. ಇದು ‘ತಾಂತ್ರಿಕ ಸಮಸ್ಯೆ’ಯೇ ಹೊರತು ಮತ್ಯಾವ ಉದ್ದೇಶ ಅಲ್ಲಿ ಇರಲಿಲ್ಲ. ಪತ್ರಿಕಾಗೋಷ್ಠಿ ತರಾತುರಿಯಲ್ಲಿ ಆಯೋಜನೆಗೊಂಡಿದ್ದು, ಅಲ್ಪಾವಧಿಯಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು . ಅಲ್ಲದೇ ಕೆಲವೇ ಕೆಲ ಪತ್ರಕರ್ತರಿಗೆ ಮಾತ್ರ ಆಹ್ವಾನ ಕಳುಹಿಸಲಾಗಿತ್ತು. ಸಮಯದ ಅಭಾವ ಇದ್ದ ಕಾರಣ, ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಅಮೀರ್ ಖಾನ್ ಮುತ್ತಕಿ ಸ್ಪಷ್ಟನೆ ನೀಡಿದ್ದಾರೆ.

   ಜೊತೆಗೆ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದ್ದು, ಭಾನುವಾರ(ಅ.12) ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಪುರುಷರ ಜೊತೆಗೆ ಮಹಿಳಾ ಪತ್ರಕರ್ತರಿಗೆ ಹೇಳಿಕೆ ನೀಡಿದ್ದು, ತಾನು ಈ ಹಿಂದೆ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳೆಯರಿಗೆ ನಿಷೇಧ ಹೇರುವ ಉದ್ದೇಶ ಇರಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. 

   ಇನ್ನು ಈ ಘಟನೆಗೆ ವಿರೋಧ ಪಕ್ಷದವರು ಆಡಳಿತರೂಢ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿರವುದು ಭಾರತೀಯ ಮಹಿಳೆಗೆ ಮಾಡಿದ ಅವಮಾನ. ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿರುವ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

  “ನಮ್ಮ ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನ ಹಕ್ಕು ಇದೆ. ಈ ರೀತಿ ತಾರತಮ್ಯ ನಡೆಯುತ್ತಿರುವ ಸಂದರ್ಭದಲ್ಲಿ, ನಿಮ್ಮ ಮೌನವೇ ನಾರಿಶಕ್ತಿ ಘೋಷಣೆಗಳ ವಿರುದ್ಧದ ಸಂದೇಶವನ್ನು ನೀಡುತ್ತಿದೆ,” ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಟೀಕಿಸಿದರು.

   ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ ಎಂಬುದಕ್ಕೆ ಈಗಾಗಲೇ ನಮ್ಮ ಕಣ್ಣ ಮುಂದೆ ನಾನಾ ನಿರ್ದಶನಗಳು ನಮ್ಮ ಕಣ್ಣ ಮುಂದೆ ಇವೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮಹಿಳೆಯರು ಹೆಸರು ಮಾಡುತ್ತಿದ್ದಾರೆ ಎಂಬುದರ ಅತಿಶಯೋಕ್ತಿಯ ನಡುವೆಯೂ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಜೀವನ ಅತ್ಯಂತ ಕಷ್ಟಕರವಾಗಿದ್ದು, ಇಂದಿಗೂ ಅಲ್ಲಿ ಕೆಲ ಅಮಾನವೀಯ ಪದ್ಧತಿಗಳನ್ನು ಜೀವಂತವಾಗಿದ್ದು, ಇದೀಗ ತಾಜಾ ಉದಾಹರಣೆಯಂತೆ ಈ ಘಟನೆ ನಡೆದಿದೆ.

Recent Articles

spot_img

Related Stories

Share via
Copy link