ತಂದೂರಿ ರೊಟ್ಟಿ ಮೇಲೆ ಉಗುಳಿದ ತಯಾರಕ..!

ಲಕ್ನೋ : 

        ಬೀದಿ ವ್ಯಾಪಾರಿಯೊಬ್ಬ ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿದ್ದು, ಆರೋಗ್ಯ ದೃಷ್ಟಿಯಿಂದ ಅಂಗಡಿಯವನನ್ನು ಸೇರಿ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ನೋದ ಹೊರವಲಯದಲ್ಲಿರುವ ಕಾಕೋರಿಯ ರಸ್ತೆಬದಿಯಲ್ಲಿ ಉಪಾಹಾರ ಗೃಹವಿತ್ತು.

       ಆ ಅಂಗಡಿಯವನು ರೊಟ್ಟಿಯನ್ನು ತಯಾರಿಸಲು ಹಿಟ್ಟಿನ ಮೇಲೆ ಉಗುಳುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ 22 ಸೆಕೆಂಡಿನ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು,

ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಪರಿಣಾಮ ಅಂಗಡಿಯವನನ್ನು ಸೇರಿ ಐದು ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕಕೋರಿ ಸಹಾಯಕ ಪೊಲೀಸ್ ಕಮಿಷನರ್ ಅಶುತೋಷ್ ಕುಮಾರ್, ಧಾಬಾ ಮಾಲೀಕ ಯಾಕೂಬ್ ಮತ್ತು ಡ್ಯಾನಿಶ್, ಹಫೀಜ್, ಮುಖ್ತಾರ್, ಫಿರೋಜ್ ಮತ್ತು ಅನ್ವರ್‍ರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳ ವಿರುದ್ಧ ರೋಗ ಹರಡಿಸುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ಸಮಯದಲ್ಲಿ ಈ ರೀತಿಯ ಕೃತ್ಯ ಮಾಡಿದರುವುದು ದೊಡ್ಡ ಅಪರಾಧವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link