ಕೊರಟಗೆರೆ :-
ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠ ತಂಗನಹಳ್ಳಿ ಕೊರಟಗೆರೆ ಜುಲೈ 26ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3:00 ವರೆಗೆ ಬೃಹತ್ ಉಚಿತ ಆರೋಗ್ಯ ಮತ್ತು ಹೃದಯ ರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಬಸವ ಮಹಾಲಿಂಗ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ತ್ರಿಕಾಲ ಜ್ಯೋತಿಷ್ಯ ಸೇವಾ ಟ್ರಸ್ಟ್ (ರಿ) ಸಹಯೋಗದಲ್ಲಿ ಜುಲೈ 26ರ ಶನಿವಾರ ಮಠದ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ಮತ್ತು ಹೃದಯ ರೋಗ ತಪಶನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ .
ಬೃಹತ್ ಉಚಿತ ಆರೋಗ್ಯ ಮತ್ತು ಹೃದಯ ತಪಾಸಣಾ ಶಿಬಿರದ ವೇದಿಕೆಯನ್ನ ಕಾಗಿನೆಲೆ ಮಹಾ ಸಂಸ್ಥಾನ ಮಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಜಿಗಳು, ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗ ಮಠದ ಶಾಂತವೀರ ಮಹಾಸ್ವಾಮಿಗಳು, ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಪಟ್ಟನಹಳ್ಳಿ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಬೆಂಗಳೂರಿನ ತ್ರಿಲೋಕ ಜ್ಯೋತಿಷ್ಯ ಸೇವಾ ಟ್ರಸ್ಟ್ ನ ನಾಗೇಶ್ ಗುರೂಜಿ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಗೋ ಸಂರಕ್ಷಕರು ಹಾಗೂ ಸಮಾಜಸೇವಕರಾದ ಮಹೇಂದ್ರ ಮನೋಥ್ ಜೈನ್, ತಾಸಿಲ್ದಾರ್ ಮಂಜುನಾಥ್, ಕರ್ನಾಟಕ ಅಲೆಮಾರಿ ಹರಿಹಲಮಾರಿ ವಿಮುಕ್ತ ಬುಡಕಟ್ಟು ಒಕ್ಕೂಟದ ರಾಜ್ಯಾಧ್ಯಕ್ಷಪ್ಪ ಶೇಷಪ್ಪ, ಸಮಾಜ ಶಿವಪ್ರದ ಲಗ್ಗೆರೆ ನಾರಾಯಣಸ್ವಾಮಿ ಉಪಸ್ಥಿತರಿರಲಿದ್ದು, ಕೊರಟಗೆರೆ ತಾಲೂಕ್ ಪಂಚಾಯತಿ ಕರೆ ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮ್, ಗೃಹ ಸಚಿವರ ವಿಶೇಷ ಕಾರ್ಯದರ್ಶಿ ನಾಗಣ್ಣ, ಕರ್ನಾಟಕ ವಂಶ ಪಾರಂಪರಿಗೆ ಜ್ಯೋತಿಷ್ಯರಾದ ಎಚ್ಎಲ್ ನಾರಾಯಣ್, ಎಲೆ ರಾಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ನರಸಿಂಹರಾಜು, ಶ್ರೀ ಮಠಕ್ಕೆ ಸಲಹೆ ಮತ್ತು ಸಹಕಾರವನ್ನು ತುರುವೇಕೆರೆ ಜಗದೀಶ್, ಬಿಡಿದಿ ರಾಕೇಶ್ , ತಂಗನಹಳ್ಳಿ ಪ್ರಕಾಶ್, ಬೈಚೇನಹಳ್ಳಿ ರಾಕೇಶ್, ಗಿರಿಜಾ ಮೆಡಿಕಲ್ ಹನುಮಂತರಾಜು ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.
