ಮಜಾ ಟಾಕೀಸ್ ಬಗ್ಗೆ ಶಾಕಿಂಗ್ ವಿಚಾರ ತೆರೆದಿಟ್ಟ ತರಂಗ ವಿಶ್ವ….!

ಬೆಂಗಳೂರು :

    ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್​ನಲ್ಲಿ ಎರಡು ಹೊಸ ಶೋ ಆರಂಭವಾಯಿತು. ಒಂದು ಬಾಯ್ಸ್ vs ಗರ್ಲ್ಸ್ ಮತ್ತೊಂದು ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ (Maja Talkies). ಬಾಯ್ಸ್ vs ಗರ್ಲ್ಸ್ ಶೋಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿರಲಿಲ್ಲ, ಟಿಆರ್​ಪಿ ಕೂಡ ಬರುತ್ತಿರಲಿಲ್ಲ. ಹೀಗಾಗಿ ಇತ್ತೀಚೆಗಷ್ಟೆ ಈ ಶೋನ ಮುಗಿಸಲಾಯಿತು. ಬಳಿಕ ಕಳೆದ ವಾರ ದಿಢೀರ್ ಆಗಿ ಮಜಾ ಟಾಕೀಸ್ ಕೂಡ ಕೊನೆಗೊಂಡಿದೆ. ಯಾವುದೇ ಸೂಚನೆ ನೀಡದೆ ಮಜಾ ಟಾಕೀಸ್ ಫಿನಾಲೆ ವೀಕ್ ಎಂಬ ಪ್ರೊಮೋ ಹಂಚಿಕೊಂಡು ಕಲರ್ಸ್ ಕನ್ನಡ ಮಜಾ ಟಾಕೀಸನ್ ಅನ್ನು ಮುಗಿಸಿತು.

   ಕೇವಲ 32 ಎಪಿಸೋಡ್​ಗೆ ಮಜಾ ಟಾಕೀಸ್ ಎಂಡ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ವಿಶೇಷ ಎಂದರೆ ಈ ಬಾರಿಯ ಮಜಾ ಟಾಕೀಸ್ ಬರೀ ಹೊಸಬರಿಂದಲೇ ಕೂಡಿತ್ತು. ಕುರಿ ಪ್ರತಾಪ್ ಮತ್ತು ಸೃಜನ್ ಲೊಕೇಶ್ ಬಿಟ್ಟರೆ ಮತ್ಯಾರು ಹಳಬರು ಇರಲಿಲ್ಲ. ಮುತ್ತುಮಣಿ ಕ್ಯಾರೆಕ್ಟನ್ ಮಾಡುತ್ತಿದ್ದ ತರಂಗ ವಿಶ್ವ ಕೂಡ ಅರ್ಧಕ್ಕೆ ಶೋನಿಂದ ಹೊರಬಂದಿದ್ದರು. ಇನ್ನು ಮುಂದೆ ಮುತ್ತುಮಣಿ ಯಾಗಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಪೋಸ್ಟ್‌ ಹಂಚಿಕೊಂಡು ಮಜಾ ಟಾಕೀಸ್ ತೊರೆದಿದ್ದರು.

   ತುಕಾಲಿ ಸಂತೋಷ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿದಂತೆ ಹೊಸಬರೇ ಮಜಾ ಮನೇಲಿದ್ದರು. ಅಲ್ಲದೆ ಇಂದ್ರಜಿತ್ ಲಂಕೇಶ್ ಇಜಿಲ-ಸೃಜನ್ ಕಾಂಬಿನೇಷನ್ ಕೂಡ ಇರಲಿಲ್ಲ. ಇವರ ಜಾಗಕ್ಕೆ ಯೋಗರಾಜ್ ಭಟ್ ಬಂದಿದ್ದರು. ಮಜಾ ಟಾಕೀಸ್​ನ ಟೀಮ್ ಸಂಪೂರ್ಣ ಬದಲಾಗಿದ್ದೇ ಹೊಡೆತ ಬಿದ್ದಿತು, ಇದಕ್ಕಾಗಿ ಶೋನ ಬೇಗನೆ ಮುಗಿಸಿದರು ಎಂಬ ಮಾತು ಕೂಡ ಇದೆ.

   ಸದ್ಯ ತರಂಗ ವಿಶ್ವ ಮಜಾ ಟಾಕೀಸ್ ಬಗ್ಗೆ ಹಾಗೂ ತಾನು ಈ ಶೋನ ತೊರೆದ ಬಗ್ಗೆ ಕೆಲ ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಬಾರಿಯ ಮಜಾ ಟಾಕೀಸ್‌ ಶೋನಲ್ಲಿ ಹಳೆಯ ಕಲಾವಿದರು ಇರಲಿಲ್ಲ. ಯಾಕೆಂದರೆ ಈ ಬಗ್ಗೆ ಚಾನೆಲ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ಸೃಜನ್‌ ಲೋಕೇಶ್‌ ಮತ್ತು ಚಾನೆಲ್‌ ಅವರ ನಡುವೆ ಏನೆಲ್ಲಾ ಮಾತು ಕಥೆಗಳು ಆಗಿವೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

   ಈ ಹಿಂದಿನ ಸೀಸನ್​ಗಳೆಲ್ಲ ನಾವು ಮುಂಚೆ ಸೃಜನ್‌ ಲೋಕೇಶ್‌ ಅವರ ಮನೆಯಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದೆವು, ಬರಹಗಾರರು ಕೂಡ ಅಲ್ಲಿಗೇ ಬರುತ್ತಿದ್ದರು. ಆಗ ನಾವು ಇನ್ನೊಬ್ಬರಿಗೆ ಹರ್ಟ್‌ ಆಗದೇ ಒಂದು ಡಬಲ್‌ ಮೀನಿಂಗ್‌ ಇಲ್ಲದೇ, ಬಹಳ ಸೂಕ್ಷ್ಮವಾಗಿ ಸಂಭಾಷಣೆ ಬರೆಯುತ್ತಿದ್ದೆವು. ಆದರೆ, ಈ ಬಾರಿ ಇದ್ಯಾವುದು ನನಗೆ ಅಲ್ಲಿ ಕಾಣಲಿಲ್ಲ. ಈ ಪ್ಯಾಟ್ರನ್‌ ಕಲರ್ಸ್‌ ಕನ್ನಡ ವಾಹಿನಿಯವರು ಮಾಡಿರೋದು, ಸೃಜನ್‌ ಲೋಕೇಶ್‌ ಅವರದ್ದು ಇನ್ವಾಲ್ವ್‌ಮೆಂಟ್‌ ಇದರಲ್ಲಿ ಎಷ್ಟಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದಿದ್ದಾರೆ. 

   ಈ ಬಾರಿ ಶೋನಲ್ಲಿ ಮಜಾಭಾರತ ಮತ್ತು ಗಿಚ್ಚಿ ಗಿಲಿಗಿಲಿ ಶೋನ ಅನೇಕ ಹುಡುಗರಿದ್ದರು. ಅವರೆಲ್ಲರೂ ಅದ್ಭುತ ಕಲಾವಿದರು. ಆದರೆ, ಇದನ್ನು ಗಿಚ್ಚಿ ಗಿಲಿಗಿಲಿಯಾಗಿ ತೆಗೆದುಕೊಳ್ಳಬೇಕಾ ಅಥವಾ ಮಜಾ ಟಾಕೀಸ್‌ ಆಗಿ ತೆಗೆದುಕೊಳ್ಳಬೇಕಾ ಅನ್ನೋ ಕನ್ಫ್ಯೂಷನ್‌ ಜನರಲ್ಲಿ ಮೂಡಿದೆ. ಸ್ಕಿಟ್‌ಗಳನ್ನು ನೋಡಿ ನನಗೆ ಹೊರಗಿನಿಂದಲೂ ಸಿಕ್ಕಾಪಟ್ಟೆ ಡಬಲ್‌ ಮೀನಿಂಗ್‌ ರಿಪೋರ್ಟ್‌ಗಳು ಬರುತ್ತಿದ್ವು. ಆದರೆ ನಾನು ಏನು ಮಾಡೋಕೆ ಸಾಧ್ಯ? ನಾನೊಬ್ಬ ಇದರಲ್ಲಿ ಪಾತ್ರಧಾರಿ ಅಷ್ಟೇ. ಈ ಬಾರಿಯ ಎಪಿಸೋಡ್‌ಗಳಲ್ಲಿ ಮಜಾ ಟಾಕಸ್​​ನ ಫ್ಲೇವರ್‌ ಇಲ್ಲ ಅಂತೆನಿಸಿತು. ಹಾಗಾಗಿ ಯಾರಿಗೂ ನೋವಾಗದ ರೀತಿಯಲ್ಲಿ ಒಳ್ಳೆ ಹೆಸರಿನಿಂದಲೇ ಆಚೆ ಬಂದು ಬಿಡೋಣ ಅಂತ ತೀರ್ಮಾನ ಮಾಡಿ ಹೊರಬಂದೆ ಎಂದಿದ್ದಾರೆ.

Recent Articles

spot_img

Related Stories

Share via
Copy link