ಅಹಮದಾಬಾದ್:
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಬೃಹತ್ ಮೊತ್ತ ಪೇರಿಸಿಯೂ 5 ವಿಕೆಟ್ ಅಂತರದಿಂದ ಸೋತು ಕ್ವಾಲಿಫೈಯರ್ ಹಂತದಲ್ಲಿ ತನ್ನ ಅಭಿಯಾನ ಮುಗಿಸಿತು. ತಂಡದ ಕಳಪೆ ಆಟ ಕಂಡು ಫ್ರಾಂಚೈಸಿಯ ಮಾಲಕಿ ನೀತಾ ಅಂಬಾನಿ ತಲೆ ನೋವಿನಿಂದ ಬಳಲುತ್ತಿರುವಂತೆ ಕುಳಿತಿರುವ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದ ಬಳಿಕ 6ನೇ ಟ್ರೋಫಿ ಗೆಲ್ಲುವ ಸನ್ನೆ ಮಾಡಿದ್ದ ನೀತಾ ಅಂಬಾನಿ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಗ್ಗರಿಸಿದ ಬಳಿಕ ಸೋಲಿನಿಂದ ಕಂಗೆಟ್ಟು ತಲೆ ಸುತ್ತಿ ಬಿದ್ದಂತೆ ಕುಳಿತಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಮಳೆಯಿಂದ ತಡರಾತ್ರಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 203 ರನ್ ಕಲೆಹಾಕಿತು. ಆದರೆ ಈ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ತಂಡ ವಿಫಲವಾಯಿತು. ಅನುಭವಿ ಜಸ್‌ಪ್ರೀತ್ ಬುಮ್ರಾ ಸೇರಿ ಎಲ್ಲ ಬೌಲರ್‌ಗಳು ದುಬಾರಿಯಾದರು. ಬುಮ್ರಾ ಒಂದೇ ಓವರ್‌ನಲ್ಲಿ 20 ರನ್ ಬಿಟ್ಟುಕೊಟ್ಟರು. ಬುಮ್ರಾಗೆ ಸತತ ಸಿಕ್ಸರ್ ಮತ್ತು ಬೌಂಡರಿ ಬಾರಿಸುವಾಗಲೇ ಮುಂಬೈ ತಂಡದ ಸೋಲು ಖಚಿತವಾಯಿತು.
ಇನ್ನೊಂದೆಡೆ ನಾಯಕ ಹಾರ್ದಿಕ್ ಪಾಂಡ್ಯ ಕೆಲವು ಡಿಆರ್‌ಎಸ್ ತೆಗೆದುಕೊಳ್ಳುವಲ್ಲಿ ವಿಫಲರಾದರು. ಈ ವೇಳೆ ಪಂದ್ಯ ನೋಡುತ್ತಿದ್ದ ಆಕಾಶ್ ಅಂಬಾನಿ ಮತ್ತು ತಾಯಿ ನೀತಾ ಅಂಬಾನಿ ಅವರು ಪಾಂಡ್ಯಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಿದ್ದ ವಿಡಿಯೊ ಕೂಡ ವೈರಲ್ ಆಗಿದೆ. ಒಟ್ಟಾರೆ ತಂಡದ ಆಟಗಾರರು ಕಳಪೆ ಪ್ರದರ್ಶನ ನೀಡುವ ಮೂಲಕ ನೀತಾ ಅಂಬಾನಿಗೆ ತಲೆ ನೋವು ತರಿಸಿದ್ದು ನಿಜ.
ಬೃಹತ್ ಮೊತ್ತದ ಚೇಸಿಂಗ್ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿದರು. ಈ ಪರಿಣಾಮ ಪಂಜಾವ್ ಇನ್ನೊಂದು ಓವರ್ ಬಾಕಿ ಇರುವಂತೆಯೇ 5 ವಿಕೆಟ್‌ಗೆ 207 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
