Tax notice: ತೆರಿಗೆ ನೋಟೀಸ್‌ ವಿರೋಧಿಸಿ ರಾಜ್ಯಾದ್ಯಂತ ಬಂದ್

ಬೆಂಗಳೂರು:

    ಬುಧವಾರ  ಹಾಗೂ ಗುರುವಾರ  ರಾಜ್ಯಾದ್ಯಂತ ಹಾಲು , ಮೊಸರು  ಜೊತೆಗೆ ಬೇಕರಿ ವಸ್ತುಗಳೂ ಸಹ ಸಿಗದೆ ಹೋಗಲಿವೆ. ಚಿಕ್ಕ ಪುಟ್ಟ ಅಂಗಡಿಗಳಿಗೆ ರಾಜ್ಯ ತೆರಿಗೆ ಇಲಾಖೆ  ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವುದನ್ನು ಖಂಡಿಸಿ ಬಂದ್ ನಡೆಯಲಿದೆ. ಕಾಂಡಿಮೆಂಟ್ಸ್ ಹಾಗೂ ಬೇಕರಿ ಮಾಲೀಕರು ಗುರುವಾರ ಪ್ರತಿಭಟನೆ ನಡೆಸಲಿದ್ದಾರೆ. ಜುಲೈ 25ರಂದು ಕರ್ನಾಟಕ ಕಾರ್ಮಿಕ ಪರಿಷತ್ ಬಂದ್‌ಗೆ ಕರೆಕೊಟ್ಟಿದೆ. ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಯಲಿದ್ದು, ಸುಮಾರು 10 ಸಾವಿರ ಅಂಗಡಿಗಳ ಮಾಲೀಕರು ಭಾಗಿಯಾಗುವ ನಿರೀಕ್ಷೆ ಇದೆ.

    ಜುಲೈ 25ರಂದು ಬಂದ್‌ಗೆ ಕರ್ನಾಟಕ ಕಾರ್ಮಿಕ ಪರಿಷತ್ ಕರೆ ಕೊಟ್ಟಿದೆ. ಅಂದು ಹಾಲು, ಮೊಸರು, ಬೇಕರಿ ಆಹಾರ ಪದಾರ್ಥಗಳ‌ ಮಾರಾಟ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಈ ಮುಷ್ಕರಕ್ಕೆ ಬೆಂಬಲ ನೀಡಿದ್ರೆ ಈ ಎಲ್ಲಾ ವಸ್ತುಗಳೂ ಕೂಡ ಜುಲೈ 25ರಂದು ಸಿಗುವುದು ಅನುಮಾನ.

   ಯಾವೆಲ್ಲ ವಸ್ತುಗಳು ಸಿಗಲ್ಲ :- ಹಾಲು ಮೊಸರು ತುಪ್ಪ ಸಿಗರೇಟ್,ಗುಟ್ಕಾ,ಪಾನ ಮಸಾಲಾ,,ಎಲೆ-ಅಡಿಕೆ,ಬ್ರೆಡ್,ಬನ್,ಮಿಕ್ಸರ್,ಪಪ್ಸ್,ಹಲವು ಬಗೆಯ ಬೇಕರಿ ವಸ್ತುಗಳು

   ಮತ್ತೊಂದೆಡೆ ವಾಣಿಜ್ಯ ತೆರಿಗೆ ಇಲಾಖೆ ವಿರುದ್ದ ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟ ಕೂಡ ಸಿಡಿದೆದ್ದಿದೆ. ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಸದಸ್ಯರು, ಡಿಜಿಟಲ್ ಇಂಡಿಯಾಗೆ ಇಡೀ ದೇಶವೇ ಬೆರಗಾಗಿತ್ತು. ಆದರೆ ಈಗ ಬರುತ್ತಿರುವ ನೊಟೀಸ್ ಎಲ್ಲರಿಗೂ ನಿದ್ದೆಗೆಡಿಸಿದೆ. ಡಿಜಿಟಲ್ ಇಂಡಿಯಾಗೆ ಬೆಂಬಲವಾಗಿ ಎಲ್ಲಾ ಸಣ್ಣಪುಟ್ಟ ಬೇಕರಿ ಮತ್ತು ಕಾಂಡಿಮೆಂಟ್ಸ್ ವ್ಯಾಪಾರಿಗಳು ಇದ್ದರ. ನಾವು ಡಿಜಿಟಲ್ ಇಂಡಿಯಾ ವಿರುದ್ಧ ಇಲ್ಲ. ಆದರೆ ನಮ್ಮ ವ್ಯಾಪಾರಿಗಳಿಗೆ ಈ ಟ್ಯಾಕ್ಸ್ ರೂಲ್ ವಿಚಾರ ಗೊತ್ತಾಗ್ತಿಲ್ಲ ಎಂದಿದ್ದಾರೆ.

    ಒಬ್ಬ ಸಣ್ಣ ವ್ಯಾಪಾರಿ ಬಳಿ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಕಟ್ಟಿ ಅಂತ ಹೇಳಿದ್ರೆ ಹೇಗೆ? ಏಕಾಏಕಿ ಇಷ್ಟೊಂದು ಟ್ಯಾಕ್ಸ್ ಕಟ್ಟೋದು ಹೇಗೆ? ಕೂಡಲೇ ರಾಜ್ಯ ಸರ್ಕಾರ ಟ್ಯಾಕ್ಸ್ ವಿಚಾರದಲ್ಲಿ ಮಧ್ಯಸ್ಥಿಕೆಗೆ ಬರಬೇಕು ಅಂತ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಈ ನೋಟಿಸ್‌ಗಳ ವಿಚಾರದಲ್ಲಿ ನಮಗೆ ಸಹಾಯ ಮಾಡಬೇಕು ಅಂತ ಮನವಿ ಮಾಡಿದ್ದಾರೆ.

   ಪ್ರಧಾನಿ ಅವರು ಡಿಜಿಟಲ್ ಇಂಡಿಯಾ ಅಂತ ಒಳ್ಳೆ ಪರಿಕಲ್ಪನೆ ತಂದಿದ್ದಾರೆ. ಬೀದಿ ಬದಿ ವ್ಯಾಪಾರಿ, ತರಕಾರಿ ಮಾರ್ಕೆಟ್‌ನವರೂ UPI ಬಳಕೆ ಮಾಡ್ತಾ ಇದ್ದಾರೆ. ಕಾಂಡಿಮೆಂಟ್ಸ್ ಸಿಗರೇಟ್ ಇಂದ ಚಿಕ್ಕ ಪುಟ್ಟ ಐಟಮ್ ಎಲ್ಲಾ ಸೇಲ್ ಮಾಡ್ತಾರೆ. ಮುಂಜಾನೆ 5 ಗಂಟೆಯಿಂದ ರಾತ್ರಿವರೆಗೂ ಕಷ್ಟ ಪಟ್ಟು ಕೆಲಸ ಮಾಡ್ತಾ ಇರ್ತಾರೆ. ಇವತ್ತು ವ್ಯಾಪಾರಿಗಳಿಗೆ ಬಂದಿರೋ ನೋಟಿಸ್ ಗೆ ರಾಜ್ಯ & ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಅಂತ ಆಗ್ರಹಿಸಿದರು.

Recent Articles

spot_img

Related Stories

Share via
Copy link