ನವದೆಹಲಿ:
ದೇಶದಲ್ಲಿ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಟಿಸಿಎಸ್ ನ ಸಿಇಒ ರಾಜೇಶ್ ಗೋಪಿನಾಥನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಂಪನಿಯ ಬಿಎಫ್‌ಎಸ್‌ಐ ವಿಭಾಗದ ಜಾಗತಿಕ ಮುಖ್ಯಸ್ಥರಾದ ಕೆ ಕೃತಿವಾಸನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.ಇನ್ನೂ ಸಿಇಓ ರಾಜೀನಾಮೆಯಿಂದಾಗಿ ಕಂಪನಿಯ ಷೇರುಗಳ ವಹಿವಾಟು ಮತ್ತು ಬೆಲೆಗಳ ಮೇಲೆ ಯಾವುದೇ ಕಾರಣಕ್ಕೂ ಪರಿಣಾಮ ಆಗುವುದಿಲ್ಲಾ ಎಂದು ಕಂಪನಿ ತಿಳಿಸಿದೆ
ಅವರ ರಾಜೀನಾಮೆಯು ಸೆಪ್ಟೆಂಬರ್ 15, 2023 ರಂದು ಜಾರಿಗೊಳ್ಳಲಿದೆ. ಅಲ್ಲಿಯವರೆಗೆ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಟಿಸಿಎಸ್ ತಿಳಿಸಿದೆ.
“ರಾಜೇಶ್ ಗೋಪಿನಾಥನ್ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನೊಂದಿಗೆ 22 ವರ್ಷಗಳ ವೃತ್ತಿಜೀವನದ ನಂತರ ಮತ್ತು ಕಳೆದ 6 ವರ್ಷಗಳಿಂದ ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ತಮ್ಮ ಇತರ ಆಸಕ್ತಿಗಳನ್ನು ಮುಂದುವರಿಸಲು ಕಂಪನಿಯಿಂದ ನಿರ್ಗಮಿಸಲು ನಿರ್ಧರಿಸಿದ್ದಾರೆ” ಎಂದು ಕಂಪನಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ