ವೈಜ್ಞಾನಿಕವಾಗಿ ಅಸಾಧ್ಯ.! ಅನ್ನ-ನೀರು ಮುಟ್ಟಲ್ಲ: 30 ವರ್ಷಗಳಿಂದ ಕೇವಲ ಟೀ ಕುಡಿದೇ ಬದುಕಿದ್ದಾಳೆ ಈಕೆ..!

ರಾಯ್  ಪುರ : 

 ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ ಆದರೆ ಛತ್ತೀಸ್‍ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ.

      ಛತ್ತೀಸ್‍ಗಢದ ಕೊರಿಯಾ ಜಿಲ್ಲೆಯ ಬರಾದಿಯಾ ಗ್ರಾಮದ ನಿವಾಸಿ ಪಿಲ್ಲಿ ದೇವಿ(44) ಕಳೆದ 30 ವರ್ಷಗಳಿಂದ ಕೇವಲ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ. ಯಾವುದೇ ಆಹಾರ ಸೇವಿಸದಿದ್ದರು ಪಿಲ್ಲಿ ದೇವಿಯವರ ಆರೋಗ್ಯ ಚೆನ್ನಾಗಿಯೇ ಇದೆ.

ಪಿಲ್ಲಿ ದೇವಿ ಅವರು ತಮ್ಮ 11 ವರ್ಷದ ವಯಸ್ಸಿನಲ್ಲಿಯೇ ಆಹಾರ ಹಾಗೂ ನೀರು ಸೇವನೆಯನ್ನು ತ್ಯಜಿಸಿದ್ದರು. ಅಂದಿನಿಂದಲೂ ಅವರು ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹಾಗಾಗಿ ಇಡೀ ಗ್ರಾಮದಲ್ಲಿ ಪಿಲ್ಲಿ ದೇವಿಯನ್ನು ‘ಚಾಯ್ ವಾಲಿ ಚಾಚಿ’ ಎಂದೇ ಕರೆಯುತ್ತಾರೆ.

ತಮ್ಮ ಮಗಳು ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಒಂದು ದಿನ ಪಾಟ್ನಾ ಶಾಲೆಯ ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಹೋಗಿದ್ದಳು. ಆ ದಿನ ಮನೆಗೆ ವಾಪಸ್ ಬಂದಾಗಿನಿಂದ ಆಕೆ ನೀರು ಮತ್ತು ಆಹಾರವನ್ನು ತಿನ್ನುವುದನ್ನು ಬಿಟ್ಟಳು.

ಮೊದಲಿಗೆ ಟೀ ಜೊತೆ ಬಿಸ್ಕಟ್ ಮತ್ತು ಬ್ರೆಡ್ ತಿನ್ನುತ್ತಿದ್ದಳು, ಆದ್ರೆ ಕೆಲ ತಿಂಗಳ ನಂತರ ಬಿಸ್ಕಟ್ ಮತ್ತು ಬ್ರೆಡ್ ತಿನ್ನೋದನ್ನು ಬಿಟ್ಟಳು ಎಂದು ಮಹಿಳೆಯ ತಂದೆ ರತಿ ರಾಮ್ ಹೇಳಿದ್ದಾರೆ. ಯಾಕೆ ಹೀಗೆ ಪಿಲ್ಲಿ ವರ್ತಿಸುತ್ತಿದ್ದಾಳೆ ಅಂತ ತಿಳಿಯದೆ, ಅವಳಿಗೆ ಏನಾದರು ಕಾಯಿಲೆ ಇದಿಯಾ ಎಂದು ಭಯಗೊಂಡು ವೈದ್ಯರಿಗೆ ತೊರಿಸಿದ್ದೇವು. ಆದರೆ ಆಕೆಗೆ ಯಾವುದೇ ಕಾಯಿಲೆ ಇಲ್ಲ,

ಅವಳು ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು ಎಂದು ಮಹಿಳೆಯ ಸಹೋದರ ತಿಳಿಸಿದ್ದಾರೆ. ಅಲ್ಲದೆ ಪಿಲ್ಲಿ ದೇವಿ ಮನೆಯಿಂದ ಹೊರ ಹೊಗುವುದು ಅಪರೂಪ, ಯಾವಾಗಲೂ ಶಿವಧ್ಯಾನದಲ್ಲಿ ಮುಳುಗಿರುತ್ತಾರೆ ಎಂದುರು.

ಹಾಗೆಯೇ ಕೇವಲ ಟೀ ಕುಡಿದು ಮಾನವ 33 ವರ್ಷ ಬದುಕುವುದು ವೈಜ್ಞಾನಿಕವಾಗಿ ಅಸಾಧ್ಯ, ಆದ್ರೆ ಪಿಲ್ಲಿ ದೇವಿ ಬದುಕಿರೋದೇ ಒಂದು ಪವಾಡ ಎಂದು ಜಿಲ್ಲಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link