ಬೆಂಗಳೂರು
ಪಿಂಚಣಿ ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದಿಂದ ಪಿಂಚಣಿಗಾಗಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಬಂದಿದ್ದ ಶಿಕ್ಷಕರೊಬ್ಬರು ಫೆ.22ರ ಮಧ್ಯರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ .
ಮೃತಪಟ್ಟಿರುವ ಶಂಕರಪ್ಪ ಬೋರಡ್ಡಿ ಎಂಬುವವರು ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಶಿಕ್ಷಕರಾಗಿದ್ದು, ಮಂಗಳವಾರ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಶಂಕರಪ್ಪ ಬೋರಡ್ಡಿ ಬುಧವಾರ ರಾತ್ರಿ ವೇಳೆ ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇನ್ನೂ ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಡರಾತ್ರಿಯಲ್ಲೇ ಮೃತ ದೇಹವನ್ನು ರಾಯಚೂರಿಗೆ ರವಾನಿಸಲಾಗಿದೆ. ಇನ್ನೂ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಶಿಕ್ಷಕರ ಪ್ರತಿಭಟನೆ ನಿರತ ಶಿಕ್ಷಕರಿಂದ ಮಾಹಿತಿ ಸಿಕ್ಕಿದ್ದು, ಶಂಕರಪ್ಪ ಬೋರಡ್ಡಿ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ