ತುಮಕೂರು:
ತುಮಕೂರು ನಗರದ ಭಾರತಮಾತಾ ಶಾಲಾ ಶಿಕ್ಷಕಿ ಫಹರತ ಫಾತಿಮಾಗೆ ಶಿಕ್ಷೆ ಶಿಕ್ಷೆ ವಿಧಿಸಲಾಗಿದೆ. 2011ರ ಫೆಬ್ರವರಿ 17ರಂದು ಶಾಲೆಯಲ್ಲಿ ಇವರು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದರು.
ಸರಿಯಾಗಿ ಓದುತ್ತಿಲ್ಲ ಎಂದು ವಿದ್ಯಾರ್ಥಿಗೆ ಹೊಡೆದ ಖಾಸಗಿ ಶಾಲೆ ಶಿಕ್ಷಕಿಗೆ ತುಮಕೂರು ನ್ಯಾಯಾಲಯ 3 ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ತುಮಕೂರು ನಗರದ ಭಾರತಮಾತಾ ಶಾಲಾ ಶಿಕ್ಷಕಿ ಫಹರತ ಫಾತಿಮಾ ಶಿಕ್ಷೆಗೆ ಒಳಗಾದವರು. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2011ರ ಫೆಬ್ರವರಿ 17ರಂದು ಶಾಲೆಯಲ್ಲಿ ಈ ಘಟನೆ ನಡೆದಿತ್ತು. ರೋಶಿನಿ ತಾಜ್ ಎಂಬ ಬಾಲಕಿಗೆ ಶಿಕ್ಷಕಿಯು ಕೋಲಿನಿಂದ ಹೊಡೆದು ಬಲಕಣ್ಣಿಗೆ ಹಾನಿ ಮಾಡಿದ್ದಳು. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ದೋಷಾರೋಪಣ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ