ವರ್ಷದಿಂದ ಶಾಲೆಗೆ ಬಾರದ ಶಿಕ್ಷಕಿ

ತುರುವೇಕೆರೆ:

                                  ಮಕ್ಕಳ ಜೊತೆ ಪೋಷಕರು ಸೇರಿ ಪ್ರತಿಭಟನೆ

ತಾಲ್ಲೂಕಿನ ಮುನಿಯೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಇಂಗ್ಲೀಷ್ ಶಿಕ್ಷಕರು ಬೇಕೆಂದು ಪುಟಾಣಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮುನಿಯೂರಿನ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲಭಾಷೆ ಪಾಠ ಮಾಡುತ್ತಿದ್ದ ಶಿಕ್ಷಕಿ ಕಳೆದ ಒಂದು ವರ್ಷಗಳಿಂದ ಮುಖ್ಯ ಶಿಕ್ಷಕರ ಗಮನಕ್ಕೆ ತರದೆ ಶಾಲೆಗೆ ಅನಧಿಕೃತ ಗೈರು ಹಾಜರಾಗಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನೆಡೆಯಾಗಿದ್ದು, ಶೀಘ್ರವೇ ಶಿಕ್ಷಕರನ್ನು ನೇಮಕ ಮಾಡುವಂತೆ ಪೋಷಕರು ಒತ್ತಾಯಿಸಿದರು.

ಶಾಲಾ ಆರಂಭದ ದಿನಗಳಲ್ಲಿ 130 ಮಕ್ಕಳು ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದರು.

ಆದರೆ ಇಂಗ್ಲೀಷ್ ಶಿಕ್ಷಕರ ಗೈರು ಹಾಜರಿಯಿಂದಾಗಿ ಪೋಷಕರು ತಮ್ಮ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆಂದು ತುರುವೇಕೆರೆ ಪಟ್ಟಣದ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಸದ್ಯಕ್ಕೆ ಶಾಲೆಯಲ್ಲಿ ಕೇವಲ 80 ಮಕ್ಕಳಿದ್ದಾರೆ, ಹೀಗಾದರೆ ಮಕ್ಕಳ ಮುಂದಿನ ಭವಿಷ್ಯವೇನೆಂದು ಎಸ್‍ಡಿಎಂಸಿ ಸದಸ್ಯರು ಪ್ರಶ್ನಿಸುತ್ತಾರೆ.

ಇಂತಹ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಐದಾರು ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು, ಜಿಲ್ಲಾ ಉಪ ನಿರ್ದೇಶಕರ ಕಚೇರಿ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜೊತೆಗೆ ಶಾಲೆಗೆ ಗ್ರಾಮಸ್ಥರು ನೀಡಿದ್ದ ಪೀಠೋಪಕರಣಗಳನ್ನು ಮಾರಿಕೊಂಡಿದ್ದಾರೆಂದು ನೂತನ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಗ್ರಾಮಸ್ಥರು ಆರೋಪಿಸಿ ಧರಣಿ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಇಸಿಓ ಸಿದ್ದಪ್ಪ ಅವರು ಪೋಷಕರು ಮತ್ತು ಎಸ್‍ಡಿಎಂಸಿ ಸದಸ್ಯರುಗಳ ಮನವೊಲಿಸಲು ಪ್ರಯತ್ನಿಸಿದರು.
ಪ್ರತಿಭಟನೆಯಲ್ಲಿ ಎಸ್‍ಡಿಎಮ್‍ಸಿ ಅಧ್ಯಕ್ಷ ಬಸವರಾಜು, ಗ್ರಾಪಂ ಸದಸ್ಯ ಮೋಹನ್, ಗ್ರಾಮದ ಮುಖಂಡರಾದ ಪುರುಷೋತ್ತಮ್, ಎಂ.ಟಿ.ರಮೇಶ್, ಪ್ರವೀಶ್, ಜಯರಾಂ, ಸಾಗರ್, ಸಿದ್ಧೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ತುರುವೇಕರೆ ತಾಲ್ಲೂಕಿನ ಮುನಿಯೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂಗ್ಲೀಷ್ ಶಿಕ್ಷಕರು ಬೇಕೆಂದು ಒತ್ತಾಯಿಸಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಶಾಲೆಯ ಶಿಕ್ಷಕರ ಗೈರು ಹಾಜರಿಗೆ ಸಂಬಂಧಿಸಿದಂತೆ ಈಗಾಗಲೇ ಎರಡು ನೋಟಿಸ್ ನೀಡಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವೆ. ಸದ್ಯಕ್ಕೆ ಬೇರೊಬ್ಬರು ಶಿಕ್ಷಕರನ್ನು ಸದರಿ ಶಾಲೆಗೆ ನಿಯೋಜಿಸಲಾಗಿದೆ.

-ಎಸ್.ಕೆ.ಪದ್ಮನಾಬ್, ಬಿಇಓ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link