ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಗೆಲುವು!!

ಬೆಂಗಳೂರು : 

      ಆಸ್ಟ್ರೇಲಿಯಾ ವಿರುದ್ಧ 36 ರನ್’ಗಳ ಐತಿಹಾಸಿಕ ಸರಣಿ ಜಯ ಸಾಧಿಸಿದ ಯಂಗ್ ಇಂಡಿಯಾ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

     ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಇಂದು (ಮಂಗಳವಾರ) ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಕೊನೇಯ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಟೆಸ್ಟ್‌ ಸರಣಿ 2-1ರಿಂದ ಭಾರತದ ವಶವಾಗಿದೆ.

     ತೀವ್ರ ಕುತೂಹಲ ಮೂಡಿಸಿದ್ದ ಈ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ಗೆಲ್ಲುತ್ತಿರುವುದು ಇದು ಸತತ ಎರಡನೇ ಬಾರಿ. 2018-19ರಲ್ಲೂ ವಿರಾಟ್ ಕೊಹ್ಲಿ ಪಡೆ ಚೊಚ್ಚಲ ಬಾರಿಗೆ ಇದೇ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಅಜಿಂಕ್ಯ ರಹಾನೆ ನಾಯಕತ್ವದ ಭಾರತ ತಂಡ ಈ ಸಾಧನೆ ಮಾಡಿದೆ.

      ಇದು ಭಾರತಕ್ಕೆ ಬ್ರಿಸ್ಬೇನ್ ನಲ್ಲಿ ಮೊದಲ ಗೆಲುವಾದರೆ, ಆಸ್ಟ್ರೇಲಿಯಾಗೆ 32 ವರ್ಷಗಳ ನಂತರ ಮೊದಲ ಸೋಲಾಗಿದೆ.

      ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆ ಬಿಸಿಸಿಐ 5 ಕೋಟಿ ರೂ. ಬೋನಸ್ ಘೋಷಿಸಿ ಟ್ವೀಟ್ ಮಾಡಿದೆ. ಇದು ಭಾರತೀಯ ಕ್ರಿಕೆಟ್ ನ ಅಪರೂಪದ ಕ್ಷಣಗಳು. ಭಾರತೀಯ ಆಟಗಾರರ ವೈಶಿಷ್ಟ್ಯ ಇದರಲ್ಲಿ ತಿಳಿಯುತ್ತದೆ ಎಂದು ಅಭಿನಂದಿಸಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link