ಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

ಲಕ್ನೋ: 

ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಭಾರತ ಭರ್ಜರಿಯಾಗಿ ಆರಂಭಿಸಿದೆ. ಗುರುವಾರದ ಮೊದಲ ಮುಖಾಮುಖೀಯನ್ನು 62 ರನ್ನುಗಳ ಭಾರೀ ಅಂತರದಿಂದ ಗೆದ್ದಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಎರಡೇ ವಿಕೆಟಿಗೆ 199 ರನ್‌ ಪೇರಿಸಿದರೆ, ಮೊದಲ ಎಸೆತದಿಂದಲೇ ವಿಕೆಟ್‌ ಕಳೆದುಕೊಳ್ಳಲಾರಂಭಿಸಿದ ಶ್ರೀಲಂಕಾ 6ಕ್ಕೆ 137 ರನ್‌ ಮಾಡಿ ಶರಣಾಯಿತು.

ಇಶಾನ್‌ ಪವರ್‌ ಗೇಮ್‌ :

ಆರಂಭದಲ್ಲಿ ಇಶಾನ್‌ ಕಿಶನ್‌, ಕೊನೆಯಲ್ಲಿ ಶ್ರೇಯಸ್‌ ಅವರ ಸ್ಫೋಟಕ ಬ್ಯಾಟಿಂಗ್‌ ಭಾರತ ಸರದಿಯ ಹೈಲೈಟ್‌ ಆಗಿತ್ತು. ಪವರ್‌ ಪ್ಲೇಯಲ್ಲಿ ಹತ್ತರ ಸರಾಸರಿಯಲ್ಲಿ ರನ್‌ ಬರತೊಡಗಿತು. ಇಶಾನ್‌ ಕಿಶನ್‌ ಅವರಂತೂ ಪವರ್‌ಫ‌ುಲ್‌ ಬ್ಯಾಟಿಂಗ್‌ ತೋರ್ಪಡಿಸಿದರು.

ವೆಸ್ಟ್‌ ಇಂಡೀಸ್‌ ವಿರುದ್ಧ ಮಂಕಾಗಿದ್ದ ಅವರು ಲಂಕಾ ಬೌಲರ್‌ಗಳ ಮೇಲೆ ಘಾತಕವಾಗಿ ಎರಗಿದರು. ಬೌಂಡರಿ-ಸಿಕ್ಸರ್‌ಗಳ ಸುರಿಮಳೆಯಾಗತೊಡಗಿತು. 6 ಓವರ್‌ಗಳಲ್ಲಿ 58 ರನ್‌ ಹರಿದು ಬಂತು. ಇದರಲ್ಲಿ ಇಶಾನ್‌ ಪಾಲೇ 39 ರನ್‌.

ಅರ್ಧ ಹಾದಿ ಮುಗಿಯುವಾಗ ಭಾರತದ ಮೊತ್ತ 98ಕ್ಕೆ ಏರಿತ್ತು. ಶ್ರೀಲಂಕಾ ಬ್ರೇಕ್‌ತೂÅ ಒದಗಿಸುವಲ್ಲಿ ಸಂಪೂರ್ಣ ವಿಫ‌ಲವಾಗಿತ್ತು. ಭಾರತವನ್ನು ಬ್ಯಾಟಿಂಗಿಗೆ ಇಳಿಸಿದ್ದಕ್ಕೆ ಪರಿತಪಿಸತೊಡಗಿತು. ಅವರ ಎಲ್ಲ ಬೌಲರ್‌ಗಳೂ ಚೆನ್ನಾಗಿ ದಂಡಿಸಿಕೊಂಡರು. ಫೀಲ್ಡಿಂಗ್‌ ಕೂಡ ಕಳಪೆಯಾಗಿತ್ತು.

ಈ ನಡುವೆ 30 ಎಸೆತಗಳಲ್ಲಿ ಇಶಾನ್‌ ಕಿಶನ್‌ ಅವರ 2ನೇ ಅರ್ಧ ಶತಕ ಪೂರ್ತಿಗೊಂಡಿತು. 10.3 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 100 ರನ್‌ ಹರಿದು ಬಂತು. ಕೊನೆಗೂ 12ನೇ ಓವರ್‌ನಲ್ಲಿ ಶ್ರೀಲಂಕಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಯಿತು. 32 ಎಸೆತಗಳಿಂದ 44 ರನ್‌ (2 ಫೋರ್‌, 1 ಸಿಕ್ಸರ್‌) ಮಾಡಿದ ರೋಹಿತ್‌ ಅವರನ್ನು ಲಹಿರು ಕುಮಾರ ಬೌಲ್ಡ್‌ ಮಾಡಿದರು. ಭಾರತ ಆಗ 111 ರನ್‌ ಪೇರಿಸಿತ್ತು.

ಶತಕದ ಹಾದಿಯಲ್ಲಿದ್ದ ಇಶಾನ್‌ ಕಿಶನ್‌ 89ರ ಮೊತ್ತದಲ್ಲಿ ನಾಯಕ ದಸುನ್‌ ಶಣಕ ಮೋಡಿಗೆ ಸಿಲುಕಿದರು. 56 ಎಸೆತಗಳ ಈ ಬ್ಯಾಟಿಂಗ್‌ ಆರ್ಭಟದ ವೇಳೆ 10 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಯಿತು.

15 ಓವರ್‌ ಅಂತ್ಯಕ್ಕೆ ಭಾರತದ ಮೊತ್ತ 130ಕ್ಕೆ ಏರಿತ್ತು. ಇಶಾನ್‌ ನಿರ್ಗಮಿಸುವಾಗ 17 ಓವರ್‌ ಪೂರ್ತಿಗೊಂಡಿತ್ತು. ಅಂತಿಮ 3 ಓವರ್‌ಗಳಲ್ಲಿ ಶ್ರೇಯಸ್‌ ಅಯ್ಯರ್‌-ರವೀಂದ್ರ ಜಡೇಜ ಜತೆಗೂಡಿದರು.

ರನ್‌ ಪ್ರವಾಹ ಮುಂದುವರಿಯಿತು. ಅಯ್ಯರ್‌ ಅತ್ಯಂತ ಆಕ್ರಮಣಕಾರಿ ಮೂಡ್‌ನ‌ಲ್ಲಿದ್ದರು. 28 ಎಸೆತಗಳಿಂದ ಅಜೇಯ 57 ರನ್‌ ಬಾರಿಸಿ ಅಬ್ಬರಿಸಿದರು. ಸಿಡಿಸಿದ್ದು 5 ಬೌಂಡರಿ, 2 ಸಿಕ್ಸರ್‌. ಅಯ್ಯರ್‌-ಜಡೇಜ 18 ಎಸೆತಗಳಿಂದ 44 ರನ್‌ ಸೂರೆಗೈದರು. ಕೊನೆಯ 5 ಓವರ್‌ಗಳಲ್ಲಿ 69 ರನ್‌ ಹರಿದು ಬಂತು.

ಲಂಕಾ ಪರ ಚರಿತ ಅಸಲಂಕ ಔಟಾಗದೆ 53 ರನ್‌ ಹೊಡೆದರು. ಭುವನೇಶ್ವರ್‌ ಮತ್ತು ವೆಂಕಟೇಶ್‌ ಅಯ್ಯರ್‌ ತಲಾ 2 ವಿಕೆಟ್‌ ಕಿತ್ತರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link