ನ್ಯೂಜಿಲೆಂಡ್:
ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಜಯ ದಾಖಲಿಸುವ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿ, ಸರಣಿ ಗೆಲುವಿನ ಕಿರೀಟವನ್ನೂ ಮುಡಿಗೇರಿಸಿಕೊಂಡಿದೆ.
ನ್ಯೂಜಿಲೆಂಡ್ ನೀಡಿದ್ದ 244 ರನ್ಗಳ ಗುರಿ ಬೆನ್ನಟ್ಟಿದ್ದ ಕೊಹ್ಲಿ ಪಡೆ, ಇನ್ನು 7 ಓವರ್ ಉಳಿದಿರುವಂತೆಯೇ ಗುರಿ ತಲುಪಿತು.
ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ ಶರ್ಮ ಅವರ ಭರ್ಜರಿ ಅರ್ಧ ಶತಕ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಯಿಂದ ಕಿವೀಸ್ ವಿರುದ್ಧದ ಸರಣಿಯ 3ನೇ ಪಂದ್ಯವನ್ನು ಗೆದ್ದಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.
43 ಓವರುಗಳಲ್ಲಿ 3 ವಿಕೆಟುಗಳನ್ನು ಕಳೆದುಕೊಂಡು ಗೆಲುವಿನ ಗುರಿ ತಲುಪುವ ಮೂಲಕ ಕಿವೀಸ್ ನೆಲದಲ್ಲಿ ತನ್ನ ಸಾರ್ವಕಾಲಿಕ ಗೆಲುವಿನ ಪ್ರದರ್ಶನವನ್ನು ಟೀಂ ಇಂಡಿಯಾ ದಾಖಲಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
