ಬೆಂಗಳೂರು
ವಿಮಾನ ಎಂದರೆ ಓಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೆಲವೇ ಘಂಟೆಗಳಲ್ಲಿ ತಲುಪುವ ಒಂದು ಸುಲಭ ಉಪಾಯ ಹೌದು ಆದರೆ ಅದಕ್ಕೆ ಆದ ಕೆಲವು ನೀತಿ ನಿಬಂಧನೆಗಳಿರುತ್ತವೆ ಅವುಗಳನ್ನು ಗಾಳಿತೂರುವುದು ಅಥವಾ ಮುರಿಯುವುದು ಅಕ್ಷಮ್ಯ ಅಪರಾಧ ಮತ್ತು ಬೇರೆಯವರ ಜೀವದ ಜೊತೆ ಚಲ್ಲಾಟವಾಡಿದತಾಗುತ್ತದೆ ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ 24 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಪ್ರಿಯಾಂಕಾ ಚಕ್ರವರ್ತಿ ಅವರು ಭಾನುವಾರ ತಡರಾತ್ರಿ ಇಂಡಿಗೋ ವಿಮಾನ ಸಂಖ್ಯೆ 6E 716 ರ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ವಿಮಾನವು ಕೋಲ್ಕತ್ತಾದಿಂದ ರಾತ್ರಿ 9.50 ಕ್ಕೆ ಹೊರಟು ಮೂರು ಗಂಟೆಗಳ ನಂತರ ಬೆಂಗಳೂರಿಗೆ ಬಂದಿಳಿಯಿತು.
