ಬೆಂಗಾವಲು ಪಡೆ ಮೇಲೆ ಉಗ್ರರ ದಾಳಿ

ನವದೆಹಲಿ:

     ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಶನಿವಾರ ಭಾರತೀಯ ವಾಯುಪಡೆ(ಐಎಎಫ್‌)ಯ ಬೆಂಗಾವಲು ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಐಎಎಫ್‌ ಯೋಧ ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.

     ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಮೇ 25 ರಂದು ಆರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಕೆಲವೇ ವಾರಗಳ ಮುನ್ನ ಈ ಕ್ಷೇತ್ರ ವ್ಯಾಪ್ತಿಯ ಪೂಂಚ್‌ನಲ್ಲಿ ಇಂದು ಉಗ್ರ ದಾಳಿ ನಡೆದಿದೆ.

     ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಐವರು IAF ಸಿಬ್ಬಂದಿಗೆ ಗಾಯಗೊಂಡಿದ್ದು, ತಕ್ಷಣ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಒಬ್ಬ ಏರ್ ವಾರಿಯರ್ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ ಎಂದು ಐಎಎಫ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

      ಇಂದು ಸಂಜೆ ಪೂಂಚ್‌ನ ಸುರನ್‌ಕೋಟ್ ಪ್ರದೇಶದ ಸನೈ ಟಾಪ್ ಕಡೆಗೆ ಚಲಿಸುತ್ತಿದ್ದ ಐಎಎಫ್ ವಾಹನಗಳ ಮೇಲೆ ನಾಲ್ವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಇದಕ್ಕು ಮುನ್ನ ಅಧಿಕಾರಿಗಳು ತಿಳಿಸಿದ್ದರು.

      ನಂತರ ತೀವ್ರವಾಗಿ ಗಾಯಗೊಂಡ ಸೈನಿಕರಲ್ಲಿ ಒಬ್ಬರು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಹುತಾತ್ಮರಾದರು ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link