ಒಡಿಶಾ : ಪಿಂಚಣಿಗಾಗಿ 2 ಕಿ.ಮೀ ತೆವಳುತ್ತಾ ಬಂದ ಮಹಿಳೆ….!

ಒಡಿಶಾ

    ವೃದ್ಧಾಪ್ಯವೇತನಕ್ಕಾಗಿ 70 ವರ್ಷದ ದಿವ್ಯಾಂಗ ಮಹಿಳೆಯೊಬ್ಬರು ತೆವಳುತ್ತಾ 2ಕಿ.ಮೀ ದೂರವಿರುವ ಪಂಚಾಯತ್ ಕಚೇರಿಗೆ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಕಣ್ಣೀರು ತರಿಸುವಂತಿದೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ನೋವಿನಿಂದ ತೆವಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.

 
    ಪಂಚಾಯತ್​ನ ಕಾರ್ಯನಿರ್ವಾಹಕ ಅಧಿಕಾರಿ ಪಿಂಚಣಿ ಪಡೆಯಲು ಕಚೇರಿಗೆ ಬರುವಂತೆ ಹೇಳಿದ್ದರು. ಬೇರೆ ದಾರಿ ಇಲ್ಲದೆ ಸಹಾಯ ಮಾಡುವವರು ಯಾರೂ ಇಲ್ಲದೆ 2 ಕಿ.ಮೀ ದೂರ ತೆವಳುತ್ತಾ ಬಂದಿದ್ದಾರೆ. ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದಾಗ ಘಟನೆಯನ್ನು ಒಪ್ಪಿಕೊಂಡರೂ ಮಹಿಳೆಯ ಕಷ್ಟದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳಿದರು. ಈ ಹಿಂದೆ ಪಿಂಚಣಿ ಪಡೆಯಲು ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು, ಆದರೆ ಅಪಘಾತದಲ್ಲಿ ಆಕೆಯ ಕಾಲಿಗೆ ಹಾನಿಯಾದ ನಂತರ ಅವರ ಮನೆಯವರು ಅಥವಾ ನಮ್ಮ ಕಚೇರಿಯ ಪ್ಯೂನ್ ಅವರ ಪಿಂಚಣಿಯನ್ನು ಅವರ ಮನೆಗೆ ತಲುಪಿಸುತ್ತಿದ್ದರು ಎಂದು ಅಧಿಕಾರಿ ಹೇಳಿದರು.
   ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ, ಮುಂದಿನ ತಿಂಗಳಿನಿಂದ ಆಕೆಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಪಂಚಾಯಿತಿ ಅಧ್ಯಕ್ಷ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link