ಕೊರಟಗೆರೆ :-
ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಅನ್ನಭಾಗ್ಯ ಯೋಜನೆ ಪ್ರತಿ ಪಡಿತರ ದಾರರಿಗೆ ತಲಾ 5 ಕೆಜಿಯಂತೆ 170ರೂ ಕಾಡುದಾರರ ಮುಖ್ಯಸ್ಥರ ಖಾತೆಗೆ ಜಮಾ ಆಗುತ್ತಿದ್ದು, ಫೆಬ್ರವರಿ ಹಾಗೂ ಮರ್ಚ್ ತಿಂಗಳ ಎರಡು ತಿಂಗಳ ಹಣದ ರೂಪದಲ್ಲಿ ಖಾತೆಗೆ ಜಮಾ ಆಗುತ್ತಿದ್ದ (ಡಿ ಬಿ ಟಿ) ಬದಲಿಗೆ ತಲಾ 5 ಕೆಜಿ ಅಕ್ಕಿ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡು ಈ ತಿಂಗಳಿನಿಂದ ಹಣ ದ ಬದಲಿಗೆ ಅಕ್ಕಿ ನೀಡಲು ನಿರ್ಧರಿಸಲಾಗಿದೆ ಎಂದು ಕೊರಟಗೆರೆ ತಾಸಿಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.
ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ವಿತರಿಸಲಾಗುತ್ತಿರುವ 5 ಕೆಜಿ ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚು ಉರಿಯಾಗಿ 5 ಕೆಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆಜಿ ಗೆ 34 ರೂಗಳಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ ಬಿ ಟಿ ಮೂಲಕ 170ಗಳಂತೆ ಹಣ ವರ್ಗಾಯಿಸಲಾಗುತ್ತಿದ್ದು, ಆದರೆ ಫೆಬ್ರವರಿ ತಿಂಗಳ ನಗದು ಹಣ (ಟಿ ಬಿ ಟಿ) ಬದಲಾಗಿ ಅನ್ನಭಾಗ್ಯ ಯೋಜನೆ ಅಡಿ ಪಡಿತರ ಚೀಟಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಹಂಚಿಕೆ ಮಾಡಲಿದೆ, ಫೆಬ್ರವರಿ ತಿಂಗಳು ಮುಕ್ತಾಯ ವಾಗುವುದರಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಡಿಬೆಟಿ ಬದಲಾಗಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನ ಮಾರ್ಚಿ ಯಲ್ಲಿ ಹಂಚಿಕೆ ಮಾಡಲು ಸಕಲವ್ಯವಸ್ಥೆ ಮಾಡಿಕೊಂಡಿದ್ದು ಸುವ್ಯವಸ್ಥಿತವಾಗಿ ಪಡಿತರ ಚೀಟಿ ದಾರಿಗೆ ಹಂಚಿಕೆ ಮಾಡಲಾಗುವುದು ಎಂದು ತಾಸಿಲ್ದಾರ್ ಮಂಜುನಾಥ್ ಪತ್ರಿಕ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಅಂತೋದಯ ಅನ್ನ ಯೋಜನೆ ಎಎವೈ 1,2ಹಾಗೂ 3 ಜನರಿರುವ ಫಲಾನುಭವಿಗಳಿಗೆ 35 ಅದರಿಂದ ಮೇಲ್ಪಟ್ಟ 4 ಜನರಿಗೆ 45 ಹಾಗೂ 5 ಜನರಿಗೆ 65 ಉಳಿದಂತೆ 6 ಜನರಿರುವ ಸದಸ್ಯರಿಗೆ 85 ಸೇರಿದಂತೆ 12 ಜನರವರೆಗೂ ತಲಾ 15 ಕೆಜಿ ಹೆಚ್ಚುವರಿ ಅಕ್ಕಿ ವಿತರಿಸಲಾಗುತ್ತದೆ ಎಂದು ತಾಹಶೀಲ್ದಾರ್ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
