ಶಿರಸಿ:
ತಾಲೂಕು ಹುಲೇಕಲ್ ಹೋಬಳಿ ಸದಾಶಿವಳ್ಳಿ ಮಜರೆ ತಾರಗೋಡು ಗ್ರಾಮದ ಸರ್ವೆ ನಂಬರ್ 190 ರಲ್ಲಿನ 3.31ವಿಸ್ತೀರ್ಣದ ಸರ್ಕಾರಿ ಕೆರೆ ಏರಿ ಒಡೆದು ಕೆಳಗೆ ಇರುವಂತಹ ಅಡಿಕೆ ತೋಟಕ್ಕೆ ನೀರು ನುಗ್ಗುತ್ತಿರುವುದಾಗಿ ವರದಿ ಆಗಿದೆ. ತಕ್ಷಣ ತಹಸಿಲ್ದಾರ್ ಪಟ್ಟರಾಜಗೌಡ, EO, AEE Pred, Horticulture ಇಲಾಖೆಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಳು ಚೀಲ ಹಾಕಿ ನೀರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕ್ರಮವಹಿಸಲು ಸೂಚಿಸಿದ್ದಾರೆ.








