ಸಿಎಂ ವಿರುದ್ಧ ಹೇಳಿಕೆ : ರೆಡ್ಡಿಗೆ ತಂಗಡಗಿ ಕ್ಲಾಸ್….!

ಕೊಪ್ಪಳ

        ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಶೋಕ ವೃತ್ತದಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹತ್ತು ವರ್ಷದಲ್ಲಿ ತೈಲ ಬೆಲೆಯನ್ನು ನೂರು ರೂಪಾಯಿ ದಾಟಿಸಿದರು.

    ಜನಾರ್ದನ ರೆಡ್ಡಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಆ ಪಕ್ಷದ ನಾಯಕರ ಓಲೈಕೆಗೆ ಅಬ್ಬರಿಸುತ್ತಿದ್ದಾರೆ. ಜನಾರ್ದನ ರೆಡ್ಡಿ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿನ ದೂಳು ಅಲ್ಲ, ಅವರ ಕಾಲಿನ ಉಗುರಿನಲ್ಲಿನ ದೂಳಿಗೂ ಸಮ ಇಲ್ಲ. ರೆಡ್ಡಿ ಅವರೇ ಇದು ಬಳ್ಳಾರಿಯಲ್ಲ, ಕೊಪ್ಪಳ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಸುಳ್ಳು ಆಶ್ವಾಸನೆ ಕೊಟ್ಟು ಶಾಸಕರಾಗಿ ಆಯ್ಕೆಯಾಗಿರುವ ಬಗ್ಗೆ ಜನತೆಗೆ ಗೊತ್ತಾಗಿದೆ. ಪರಿಣಾಮ ಗಂಗಾವತಿಯಲ್ಲಿ ಜನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 16,000 ಮತಗಳ ಮುನ್ನಡೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.

    ನೀವು ಗಂಗಾವತಿಯಲ್ಲಿ ದೇವಸ್ಥಾನಕ್ಕೆ ಹಣ ಕೊಡುತ್ತೀನಿ ಎಂದು ಹೇಳಿ ವೋಟು ಹಾಕಿಸಿಕೊಂಡು ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ. ಏನೇನು ಕೊಟ್ಟಿರಿ,. ಏನೇನು ಪಡೆದಿರಿ. ಗ್ರಾಂಟ್ ತೆಗೊಂಡು, ಅದಕ್ಕೆ ಏನು ಅದನ್ನು ತೆಗೆದುಕೊಂಡಿ. ಈಗ ಬಿಜೆಪಿಗೆ ಬಂದ ತಕ್ಷಣ ರಾವಣನಂತೆ ಮಾತನಾಡಿತ್ತಿರಿ ಎಂದು ಟೀಕಿಸಿದರು.

     ಇದು ಬಳ್ಳಾರಿ ಅಲ್ಲ. ನೀನು ಮಣ್ಣು ಕಳ್ಳತನ ಮಾಡಿದ ಗಿರಾಕಿ ನೀನು. ಬಳ್ಳಾರಿ ಜಿಲ್ಲೆ ಹಾಳು ಮಾಡಿ ಇಲ್ಲಿಗೆ ಬಂದಿರಿ. ಬಳ್ಳಾರಿ ಜಿಲ್ಲೆಯ ಜನ ಪಾಠ ಕಲಿಸಿದ್ದಾರೆ. ಇಲ್ಲಿಯೂ ಜನರು ಪಾಠ ಕಲಿಸುತ್ತಾರೆ, ಒಂದು ವೇದಿಕೆ ಸಿದ್ದ ಮಾಡಿ ಇಬ್ಬರು ಮಾತನಾಡೋಣ ಗೌರವದಿಂದ ಟೀಕೆ ಮಾಡಿ ಎಂದು ಶಾಸಕ ಜನಾರ್ದನ ರೆಡ್ಡಿ ಅವರಿಗೆ ಶಿವರಾಜ ತಂಗಡಗಿ ಹೇಳಿದರು.

    ಬಿಜೆಪಿಯವರು ತೈಲ ಬೆಲೆ ಏರಿಕೆಯ ಬಗ್ಗೆ ಹೋರಾಟ ಮಾಡಿದರು. ಬಿಜೆಪಿಯವರಿಗೆ ಹೋರಾಟ ಮಾಡುವ ನೈತಿಕತೆ ಇಲ್ಲ. ಪೆಟ್ರೋಲ್ ದರನ್ನು ನೂರರ ಗಡಿಗೆ ದಾಟಿಸಿದ್ದು ಬಿಜೆಪಿಯವರು. ನಾವು ಮೂರು ರೂಪಾಯಿ ಏರಿಸಿದ್ದು ತೆರಿಗೆ ಅನಿವಾರ್ಯ. ಬೇರೆ ರಾಜ್ಯಗಿಂತ ಕಡಿಮೆ ಇದೆ. ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಿ ದರ ಏರಿಕೆ ಮಾಡಲಾಗಿದೆ ಎಂದರು. ಆಡಳಿತ ಮಾಡುವಾಗ ಬೆಲೆಯೇರಿಕೆ ಅನಿವಾರ್ಯವಾಗಿದೆ. ಬೇರೆ ರಾಜ್ಯಕ್ಕೆ ಹೊಲಿಸಿದರೆ ನಾವು ಉತ್ತಮವಾಗಿದ್ದೇವೆ ಎಂದರು.

    ಕನಕಗಿರಿಯಲ್ಲಿ ಇಸ್ಪೇಟ್ ಬಗ್ಗೆ ತಮ್ಮ ಪಾಲು ಎಂದಿರುವ ಬಸವರಾಜ ದಡೇಸಗೂರು. ಅವನಿಗೆ ತಿಳಿದು ಮಾತನಾಡಲಿ ಕನಕಗಿರಿಯಲ್ಲಿ ನಮ್ಮ ಕುಟುಂಬದಲ್ಲಿ ಯಾರು ಇದ್ದಾರೆ ಎಂಬುವುದ ಹೇಳಲಿ. ಜನಾರ್ದನರಡ್ಡಿ ಮಣ್ಣಿನ ಕೇಸಿನಿಂದ ಹೊರ ಬರಲು ಬಿಜೆಪಿ ಹೋಗಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap