ಇರಾನ್‌ನಿಂದ ತಾಯ್ನಾಡಿಗೆ ಮರಳಿದ 1,700ಕ್ಕೂ ಹೆಚ್ಚು ಭಾರತೀಯರು

ನವದೆಹಲಿ:

    ಇರಾನ್ ಮತ್ತು ಇಸ್ರೇಲ್  ನಡುವಿನ ಸಂಘರ್ಷ ಉಲ್ಭಣವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಪರೇಷನ್ ಸಿಂಧು   ಮೂಲಕ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯ ಮೂಲಕ ಈವರೆಗೆ ಇರಾನ್ ನಿಂದ 1,700ಕ್ಕೂ ಹೆಚ್ಚು ಭಾರತೀಯರನ್ನು  ಮರಳಿ ಕರೆತರಲಾಗಿದೆ. ಇತ್ತೀಚೆಗೆ ಇರಾನ್‌ನಿಂದ ಮರಳಿದ ವಿಮಾನದಲ್ಲಿ ಒಟ್ಟು 28 ಭಾರತೀಯರು ಮರಳಿದ್ದಾರೆ. ಇಸ್ರೇಲ್‌ನಿಂದಲೂ ಭಾರತೀಯರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ  ತಿಳಿಸಿದೆ.

   ಇಸ್ರೇಲ್‌ನೊಂದಿಗೆ ಇರಾನ್ ಸಂಘರ್ಷ ಉಲ್ಬಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಆಪರೇಷನ್ ಸಿಂಧು ಕಾರ್ಯಾಚರಣೆ ನಡೆಸಿ ಇರಾನ್‌ನಿಂದ ಭಾರತೀಯ ಪ್ರಜೆಗಳನ್ನು ಮರಳಿ ತವರಿಗೆ ಕರೆದುಕೊಂಡು ಬರುತ್ತಿದೆ. ಇತ್ತೀಚಿನ ವಿಮಾನ ಭಾನುವಾರ ರಾತ್ರಿ ದೆಹಲಿಗೆ ಬಂದಿಳಿದಿದ್ದು, ಇದರಲ್ಲಿ ಒಟ್ಟು 28 ಭಾರತೀಯರಿದ್ದರು.

   ಇರಾನ್ ಮತ್ತು ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಆಪರೇಷನ್ ಸಿಂಧು ಪ್ರಾರಂಭಿಸಿದ್ದು, ಈ ಕಾರ್ಯಾಚರಣೆಯಡಿಯಲ್ಲಿ ಸುಮಾರು 1,713 ಭಾರತೀಯರನ್ನು ಇರಾನ್‌ನಿಂದ ಸ್ಥಳಾಂತರಿಸಲಾಗಿದೆ.

   ಇರಾನ್‌ನಿಂದ ಭಾರತಕ್ಕೆ ಆಗಮಿಸಿದ ವಿಮಾನದಲ್ಲಿ ಬಿಹಾರ, ದೆಹಲಿ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಮೂಲದವರು ಇದ್ದರು. ದೆಹಲಿಗೆ ಆಗಮಿಸಿದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ವಿದೇಶಾಂಗ ಸಚಿವೆ ಪಬಿತ್ರಾ ಮಾರ್ಗರಿಟಾ ಸ್ವಾಗತಿಸಿದರು. 

   ಆಪರೇಷನ್ ಸಿಂಧು ಕಾರ್ಯಾಚರಣೆ ಮೂಲಕ ಇನ್ನು ಮೂರು ವಿಮಾನಗಳಲ್ಲಿ ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲಾಗುತ್ತದೆ. ಮುಂದಿನ ಎರಡು ಮೂರು ದಿನಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಇದಕ್ಕಾಗಿ ಇರಾನ್‌ ಮತ್ತು ಇಸ್ರೇಲ್‌ ಅದಿಕಾರಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಚಿವರು ಹೇಳಿದರು. 

   ಸದ್ಯ ಇರಾನ್‌ನಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಹಲವಾರು ಭಾರತೀಯರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಇದೀಗ ಇಸ್ರೇಲ್‌ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತೀಯರು ಟೆಲ್ ಅವೀವ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಂಡು ಜೋರ್ಡಾನ್ ಮತ್ತು ಈಜಿಪ್ಟ್‌ಗೆ ಭೂ ಗಡಿಗಳನ್ನು ದಾಟಲು ಸೂಚಿಸಲಾಗಿದೆ. ಸರಿಯಾದ ದಾಖಲೆಗಳನ್ನು ನೀಡಿ ಭೂ ಗಡಿ ದಾಟಿ ಬಂದ ಭಾರತೀಯರನ್ನು ನೆರೆಯ ದೇಶಗಳಿಂದ ವಿಮಾನಗಳಲ್ಲಿ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

   ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದಾಗಿ 162 ಭಾರತೀಯರು ಜೋರ್ಡಾನ್‌ಗೆ ಹೋಗಿದ್ದಾರೆ. ಒಂದೆರಡು ದಿನಗಳಲ್ಲಿ ಅವರನ್ನು ಮರಳಿ ಕರೆತರಲಾಗುವುದು ಎಂದು ಮಾರ್ಗರಿಟಾ ತಿಳಿಸಿದರು.

Recent Articles

spot_img

Related Stories

Share via
Copy link