ಭಾರತೀಯ ವಿದ್ಯಾರ್ಥಿನಿಯರ ಅಪಹರಣ?

ಉಕ್ರೇನ್‌ನಿಂದ ಪೋಲೆಂಡ್‌, ರೊಮೇನಿಯಾ, ಹಂಗೇರಿ ಮುಂತಾದ ನೆರೆರಾಷ್ಟ್ರಗಳಿಗೆ ಕಾಲ್ನಡಿಗೆಯಲ್ಲಿ ಬರುತ್ತಿರುವ ಅನೇಕ ವಿದ್ಯಾರ್ಥಿನಿಯರನ್ನು ರಷ್ಯನ್‌ ಸೈನಿಕರು ಅಪಹರಿಸಿದ್ದಾರೆಂಬ ಸ್ಫೋಟಕ ಮಾಹಿತಿಯೊಂದನ್ನು ಉಕ್ರೇನ್‌ನಲ್ಲಿರುವ ಲಕ್ನೋ ಮೂಲದ ಗರ್ವಾಮಿಶ್ರ ಎಂಬ ವಿದ್ಯಾರ್ಥಿನಿಯೊಬ್ಬರು ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹಾಗೂ ಇತರರು ಭಾರತೀಯ ವಿದ್ಯಾರ್ಥಿನಿಯರನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್‌ ಅವರಲ್ಲಿ ಮನವಿ ಮಾಡಿದ್ದಾರೆ.

ವಿದ್ಯಾರ್ಥಿನಿ ಹೇಳಿದ್ದೇನು?

“ನಾವು ಕೀವ್‌ನಲ್ಲಿ ಸಿಲುಕಿದ್ದೇವೆ. ನಮಗೆ ಯಾರಿಂದಲೂ ಸಹಾಯ ಸಿಗುತ್ತಿಲ್ಲ. ಇಲ್ಲಿನ ಸ್ಥಳೀಯರು ಕೀವ್‌ನಲ್ಲಿ ನಾವಿರುವ ಕಡೆ, ನಾವು ತಂಗಿರುವ ಕೋಣೆಯ ಬಾಗಿಲು ಒಡೆದು ಒಳಬರಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ನಮಗೆ ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭೀತಿ ಆವರಿಸಿದೆ.

ಭಾರತೀಯ ದೂತಾವಾಸ ಕಚೇರಿಗೆ ಎಷ್ಟು ಬಾರಿ ಫೋನ್‌ ಮಾಡಿದರೂ, ಸ್ಪಂದನೆ ಸಿಕ್ಕಿಲ್ಲ. ನಮಗೆ ಸಹಾಯ ಸಿಗುವುದಿಲ್ಲ ಎಂದೆನಿಸತೊಡಗಿದೆ” ಎಂದು ಗಿಡ್ವಾ ತಿಳಿಸಿದ್ದಾರೆ. ಇದಲ್ಲದೆ, “ಬಂಕರ್‌ಗಳಿಂದ ಗಡಿಯ ಕಡೆಗೆ ತೆರಳುವ ಭಾರತೀಯ ವಿದ್ಯಾರ್ಥಿನಿಯರ ಸಮೂಹದ ಮೇಲೆ ರಷ್ಯಾದ ಸೈನಿಕರು, ಕೆಟ್ಟದಾಗಿ ವರ್ತಿಸಿದ್ದಾರೆ.

ಇದನ್ನು ವಿರೋಧಿಸಿದ ವಿದ್ಯಾರ್ಥಿಗಳ ಮೇಲೆ ಫೈರಿಂಗ್‌ ಮಾಡಿ, ವಿದ್ಯಾರ್ಥಿನಿಯರನ್ನು ಅಪಹರಿಸಿದ್ದಾರೆಂದು ಹೇಳಲಾಗಿದೆ. ಆ ವಿದ್ಯಾರ್ಥಿನಿಯರು, ಫೈರಿಂಗ್‌ಗೆ ಒಳಗಾದ ವಿದ್ಯಾರ್ಥಿಗಳು ಎಲ್ಲಿ ಹೋದರು ಎಂಬ ಮಾಹಿತಿಯಿಲ್ಲ” ಎಂದು ಹೇಳಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap