ಕೊರಟಗೆರೆ:-
ಹೊಸ ಮನೆ ಕಟ್ಟುವ ಸಂದರ್ಭದಲ್ಲಿ ಮನೆ ಪಕ್ಕದ 9ನೇ ತರಗತಿಯ ವಿದ್ಯಾರ್ಥಿನಿಯನ್ನ ವ್ಯಕ್ತಿಯೂರ್ವ ಬಲತ್ಕರಿಸಿ 6 ತಿಂಗಳ ಗರ್ಭಿಣಿಯನ್ನಾಗಿಸಿದ ವ್ಯಕ್ತಿಯನ್ನ ಪೋಸ್ಕೋ ಕಾಯ್ದೆ ಕೊರಟಗೆರೆ ಪೊಲೀಸ್ ನವರು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿರುವ ಘಟನೆಯೊಂದು
ಜರುಗಿದೆ .
ಕೊರಟಗೆರೆ ತಾಲೂಕಿನ ಕುರಂ ಕೋಟೆ ಗ್ರಾಮದ ಲೋಕೇಶ್ (48 ವರ್ಷ ) ಎಂಬುವ ವ್ಯಕ್ತಿ ಈ ದುಷ್ಕೃತ್ಯ ನಡೆಸಿದ್ದು, 9ನೇ ತರಗತಿಯ ವಿದ್ಯಾರ್ಥಿನಿಯನ್ನ ಆಕೆಯ ಮನೆಯವರು ಮನೆಯಲ್ಲಿ ಇಲ್ಲದಿರುವ ಸಂದರ್ಭದಲ್ಲಿ ವಿದ್ಯಾರ್ಥಿಯನೆಯನ್ನ ಬಲತ್ಕರಿಸಿ 6 ತಿಂಗಳ ಗರ್ಭಿಣಿಯನ್ನಾಗಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಲೋಕೇಶ್ ಕುರಂಕೋಟೆಯಲ್ಲಿ ಹೊಸ ಮನೆ ಕಟ್ಟುತ್ತಿದ್ದು, ಮನೆ ಕಟ್ಟುವ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿದ್ದ 9ನೇ ತರಗತಿಯ ವಿದ್ಯಾರ್ಥಿನಿಯೊಂದಿಗೆ ಬಹಳ ಸಲಿಗೆಯಿಂದ ವರ್ತಿಸಿ ವಿದ್ಯಾರ್ಥಿನಿಯ ಅರಿವಿಗೆ ಬಾರದಂತೆ ವಿದ್ಯಾರ್ಥಿನಿಯ ಮನೆಯಲ್ಲಿ ಪೋಷಕರು ಯಾರೂ ಇಲ್ಲದ ಸಂದರ್ಭವನ್ನ ಗಮನಿಸಿ ಏಕಾಯಕಿ ವಿದ್ಯಾರ್ಥಿನಿಯ ಮೇಲೆ ಬಲತ್ಕರಿಸಿ ಸಾರ್ವಜನಿಕರಿಗಾಗಲಿ ಅಥವಾ ಪೋಷಕರಿಗಾಗಲಿ ಯಾರಿಗೂ ಹೇಳದಂತೆ ಭಯ ಮೂಡಿಸಿದ ಕಾರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ವಿದ್ಯಾರ್ಥಿನಿ ಗರ್ಭವತಿಯಾಗಿ 6.5 ತಿಂಗಳು ಕಳೆದರೂ ತಾಯಿಗಾಗಲಿ ಅಥವಾ ಪೋಷಕರಿಗಾಗಲಿ ಗಮನಕ್ಕೆ ಬಾರದೆ ಇರುವುದಕ್ಕೆ ಮೂಲ ಕಾರಣ ವಿದ್ಯಾರ್ಥಿನಿ ಪ್ರತಿ ತಿಂಗಳು ಋತುಚಕ್ರ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತಿತ್ತು ಎನ್ನಲಾಗುತ್ತಿದ್ದು, ಜೊತೆಗೆ ಒಂದೊಂದು ಬಾರಿ
5-6 ತಿಂಗಳಾದರೂ ಋತುಚಕ್ರ ಪ್ರಕ್ರಿಯೆ ವ್ಯತ್ಯಯವಾಗುತ್ತಿದ್ದ ಕಾರಣ ಪೋಷಕರು ವಿದ್ಯಾರ್ಥಿನಿಯ ಮೇಲೆ ಯಾವುದೇ ಅನುಮಾನ ಬಾರದೆ ತಲೆಕೆಡಿಸಿಕೊಳ್ಳದೆ ಇದ್ದು, ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಆರ್ ಬಿ ಎಸ್ ಕೆ ಟೀಮ್ ವೈದ್ಯಕೀಯ ಪರೀಕ್ಷೆ ನಡೆಸಲು ಶಾಲೆಗೆ ಹೋದ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ಗರ್ಭವತಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ .
ಈ ಸಂಬಂಧ ಪೋಷಕರು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು , ಸಿಪಿಐ ಅನಿಲ್ ಕುಮಾರ್ ಪೋಸ್ಕೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ ಎನ್ನಲಾಗಿದೆ.