ತುಮಕೂರು :
ಭೂಮಿ ಮೇಲೆ ಅಸಂಖ್ಯಾತ ಜೀವಿಗಳಿವೆ. ಕಣ್ಣಿಗೆ ಕಾಣದ ಜೀವಿಗಳಿಂದ ಹಿಡಿದು ಬೃಹತ್ ಗಾತ್ರದವರೆಗಿನ ಜೀವರಾಶಿಗಳು ತಮ್ಮದೇ ಆದ ಜೀವನಶೈಲಿ , ಆಹಾರ ಶೈಲಿಯನ್ನು ಹೊಂದಿದೆ. ಭೂಮಿ ಮೇಲೆ ಇರುವ ಎಲ್ಲ ಜೀವರಾಶಿಗಳ ಪರಿಚಯ ಮಾನವನಿಗೆ ಇನ್ನೂ ಆಗಿಲ್ಲ.
ಕೆಲವು ಜೀವಿಗಳ ಪರಿಚಯವಿದ್ದರೆ ಇನ್ನು ಕೆಲವು ನಮಗೆ ತಿಳಿದೇ ಇಲ್ಲ. ನಾವು ಗುರುತಿಸಬಲ್ಲ ಅನೇಕ ಜೀವಿಗಳ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಇಲ್ಲ.ಪ್ರತಿಯೊಂದು ಜೀವಿಗೂ ತಾಯಿಯೇ ದೇವರಾಗಿರುತ್ತದೆ. ತಾಯಿಯ ಆಶ್ರಯ ಇಲ್ಲದೆ ಬೆಳೆಯುವ ಜೀವಿಗಳು ಅಪರೂಪವೆಂದೇ ಹೇಳಬಹುದು. ಆದರೆ ಇದೊಂದು ಜೀವಿ ಮಾತ್ರ ಹುಟ್ಟಿದ ಕ್ಷಣವೇ ತಾಯಿಯನ್ನು ಕೊಂದು ತಿನ್ನುತ್ತದೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು.
ಹುಟ್ಟಿದ ಕ್ಷಣದಿಂದ ತಾಯಿಗೇ ಅಪಾಯವನ್ನುಂಟು ಮಾಡುವ ಜೀವಿಯೆಂದರೆ ಚೇಳು . ಅತ್ಯಂತ ಪ್ರಬಲ ವಿಷವನ್ನು ಹೊಂದಿರುವ ಚೇಳಿನ ಸಣ್ಣ ಪ್ರಮಾಣ ವಿಷವೂ ಮನುಷ್ಯನಿಗೆ ಅಪಾಯ ತರಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ ಚೇಳು ಕಡಿತವು ಮರಣದ ಅಪಾಯವನ್ನು ಹೆಚ್ಚಿಸುತ್ತದೆ.
ಚೇಳುಗಳು ಸಾಮಾನ್ಯವಾಗಿ ಸಣ್ಣ ಜೀವಿಗಳನ್ನು ಬೇಟೆಯಾಡುತ್ತವೆ. ಕುಟುಕು ಮೂಲಕ ತಮ್ಮ ವಿಷವನ್ನು ಉಣಿಸುತ್ತದೆ. ಈ ವಿಷವು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಚೇಳು ತನ್ನ ಬೇಟೆಯನ್ನು ಜೀವಂತವಾಗಿ ಸೇವಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಹೆಣ್ಣು ಚೇಳುಗಳು ಒಂದೇ ಬಾರಿಗೆ ಸರಿಸುಮಾರು 100 ಮರಿಗಳಿಗೆ ಜನ್ಮ ನೀಡುತ್ತವೆ. ಅವುಗಳು ಸೇರಿ ಅಂತಿಮವಾಗಿ ತಾಯಿಯನ್ನೇ ತಿನ್ನುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ತಾಯಿ ಚೇಳು ತನ್ನ ಮರಿಗಳನ್ನು ಪೋಷಿಸುತ್ತದೆ ಮತ್ತು ರಕ್ಷಿಸುತ್ತದೆ.