ದಾವಣಗೆರೆ :
ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯಾಗಿದ್ದು, ಇಲ್ಲಿನ ರೈತರ ಜೀನನಾಧಾರ ಇದೇ ಆಗಿದೆ. ಇನ್ನು ಕಳೆದ ಒಂದು ದಿನದ ಹಿಂದೆ ಅಡಿಕೆ ಬೆಲೆ ಕುಸಿತವಾಗಿದ್ದು, ಇದೀಗ ಮತ್ತೆ ಏರಿಕೆಯತ್ತ ಸಾಗಿದೆ. ಇದರಿಂದ ಬೆಳಗಾರರ ಮುಖದಲ್ಲಿ ಮಂದಹಾಸ ತುಸು ಹೆಚ್ಚಾಗಿಯೇ ಇದೆ. ಹಾಗಾದರೆ ಇಂದು (ಜೂನ್ 13)ದರಗಳ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ ಇದೀಗ ತುಸು ಏರಿಕೆಯಾಗಿದೆ. ಜೂನ್ ಮೊದಲ ವಾರ 55,000 ರೂಪಾಯಿ ಗಡಿಯತ್ತ ಸಾಗಿದ್ದ ಬೆಲೆ, ಎರಡನೇ ವಾರ 53,000 ಕೆಳಗೆ ಇಳಿದಿತ್ತು. ಇನ್ನು ಇದೀಗ ಇಂದು (ಜೂ 13) ಗರಿಷ್ಠ ಬೆಲೆ ಕ್ವಿಂಟಲ್ ಅಡಿಕೆಗೆ 53,829 ರೂಪಾಯಿ ಇದ್ದರೆ, ಕನಿಷ್ಠ ದರ 47,336 ರೂಪಾಗಳಿ ಆಗಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದರೆ 150 ರೂಪಾಯಿ ಏರಿಕೆ ಆಗಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಇನ್ನು 2023ರ ಜುಲೈನಲ್ಲಿ ಗರಿಷ್ಠ ಬೆಲೆ 57,000 ರೂಪಾಯಿಗೆ ಏರಿತ್ತು. ಆದ್ದರಿಂದ ಇನ್ನೂ ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಇನ್ನೂ ಉತ್ತಮ ದರ ಸಿಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಇದೀಗ ಬಿಸಿಲಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಉತ್ತಮ ಮಳೆಯಾಗಿದೆ. ಇನ್ನು ಕಳೆದ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿತ್ತು.
ಆದರೆ ಇದೀಗ ಈ ಬಾರಿ ಜೂನ್ ಆರಂಭದಿಂದಲೂ ಮುಂಗಾರು ಚುರುಕು ಪಡೆದ ಹಿನ್ನೆಲೆ ಸ್ವಲ್ಪ ಚೇತರಿಕೆ ಕಂಡಿದೆ. ಜಿಲ್ಲೆಯಲ್ಲಿ ಉತ್ತಮ ಮುಂಗಾರುಮಳೆ ಆಗುತ್ತಿದೆ. ಹಾಗೆಯೇ ಮತ್ತೊಂದೆಡೆ ಹಮಾನ ಇಲಾಖೆ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ಇದರಿಂದಅಡಿಕೆ ಬೆಳೆಗಾರರಲ್ಲಿ ಮತ್ತಷ್ಟು ಮಂದಹಾಸ ಹೆಚ್ಚಾಗುವಂತೆ ಮಾಡಿದೆ.
2024ರ ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ಮುಟ್ಟಿತ್ತು. ಫೆಬ್ರವರಿ ತಿಂಗಳಲ್ಲಿ ದಿಢೀರ್ 48,000 ರೂಪಾಯಿಗೆ ಕುಸಿತವಾಗಿತ್ತು. ಮಾರ್ಚ್‌ನಲ್ಲಿ ಸ್ವಲ್ಪ ಚೇತರಿಕೆ ಕಂಡು 50,000 ರೂಪಾಯಿಗೆ ಮುಟ್ಟಿತ್ತು. ಇನ್ನು ಏಪ್ರಿಲ್‌ನಲ್ಲಿ ಗರಿಷ್ಠ 54,000 ರೂಪಾಯಿ ಗಡಿ ಮುಟ್ಟಿತ್ತು. ಮೇನಲ್ಲಿ ಗರಿಷ್ಠ 55,000 ತಲುಪಿ ಮತ್ತೆ ಕುಸಿತ ಕಂಡಿತ್ತು. ಈ ಮೂಲಕ ಜೂನ್ ತಿಂಗಳ ಮೊದಲ ವಾರ ಏರಿಕೆಯಾಗಿ ಮತ್ತೆ ಕುಸಿದಿದ್ದು, ಇದೀಗ ತುಸು ಏರಿಕೆಯತ್ತ ಸಾಗಿರುವುದು ಬೆಳಗಾರರಿಗೆ ಸಂತಸದ ವಿಚಾರವಾಗಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜೂ.12ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 47,336,ರೂ., ಗರಿಷ್ಠ ಬೆಲೆ 53,829 ಹಾಗೂ ಸರಾಸರಿ ಬೆಲೆ 52,844 ರೂ.ಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಗರಷ್ಠ ಬೆಲೆ 37,200 ರೂ. ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ