ಕಲಾವಿದರು ಹಾಸ್ಯ ಪ್ರಜ್ಞೆ ಮೂಡಿಸುವಲ್ಲಿ ವಿಫಲರಾಗುತ್ತಿದ್ದಾರೆ: ನಾಗರಾಜ ಮೂರ್ತಿ

 ಗುಬ್ಬಿ : 

     ಇತ್ತೀಚೆಗೆ ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆಯಾಗುತ್ತಿದ್ದು ಇತ್ತೀಚಿನ ನಮ್ಮ ಕಲಾವಿದರು ಹಾಸ್ಯ ಪ್ರಜ್ಞೆ ಮೂಡಿಸುವಲ್ಲಿ ವಿಫಲರಾಗುತ್ತಿದ್ದಾರೆ ಹಾಸ್ಯವೆಂದರೆ ಕೇವಲ ಅಂಗೀಕ ಅಭಿನಯ ಅಶ್ಲೀಲ ಸಂಭಾಷಣೆಗಳಿಂದ ಎಂದು ತಿಳಿದಿರುವ ಈಗಿನ ಕಲಾವಿದರ ಮನಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಾಮೂರ್ತಿ.

  ಡಾ ರಾಜಕುಮಾರ್ ರವರ ಸಮಕಾಲಿನರಾಗಿ ಕನ್ನಡ ಚಿತ್ರರಂಗದ ದೃವತಾರೆಯಾಗಿರುವ ನರಸಿಂಹರಾಜು ರವರು ಅವರು ಅಭಿನಯಿಸಿದ್ದ ಎಲ್ಲಾ ಚಿತ್ರಗಳಲ್ಲಿ ಪ್ರೇಕ್ಷಕರನ್ನು ನಕ್ಕು ನಲಿದಾಡಿಸುತ್ತಿದ್ದರು ಇವತ್ತಿಗೂ ಸತ್ಯಹರಿಸ್ಚಂದ್ರ ಸಿನಿಮಾ ಎಲ್ಲಾ ಕಾಲದಲ್ಲೂ ಹಾಸ್ಯ ಮೂಡಿಸುವಂತದ್ದು ಎಂದರು.ಇಂತಹ ಮಹಾನ್ ಕಲಾವಿದನ ಸ್ಮರಣೆ ನಮ್ಮೆಲ್ಲರ ಕರ್ತವ್ಯಇವರು ಗುಬ್ಬಿ ಕಂಪನಿ ಜೊತೆಗೆ ಇದ್ದ ಅವಿನಾಭಾವ ಸಂಬಂಧ ಇಂದು ಗುಬ್ಬಿಯಲ್ಲಿ ಇವರ ಜನ್ಮ ಶತಮಾನೋತ್ಸವ ನೆಡೆಸಲು ಕಾರಣ ವಾಗಿದೆ ಎಂದರು.

    ಇದೆ ತಿಂಗಳ 25 ರಿಂದ 5 ದಿನಗಳ ಕಾಲ ನೆಡೆಯಲಿರುವ ಹಾಸ್ಯ ಬ್ರಹ್ಮ ನರಸಿಂಹರಾಜು ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ನಾಟಕಅಕಾಡಮಿ ಡಾ ಗುಬ್ಬಿ ವೀರಣ್ಣ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಾಸ್ಯ ನಾಟಕಗಳ ಪ್ರದರ್ಶನ ಮತ್ತು ವಿಚಾರ ಸಂಕೀರ್ಣಗಳು ನೆಡೆಯುತ್ತವೆ ಎಂದು ಅಧ್ಯಕ್ಷ ನಾಗರಾಮೂರ್ತಿ ತಿಳಿಸಿದರು.

    ಈ ಕಾರ್ಯಕ್ರಮಕ್ಕೆ ಶಾಸಕ ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಮಂತ್ರಿಗಳು ರಾಜ್ಯದ ಗೃಹ ಸಚಿವರಾದ ಡಾ ಜಿ ಪರಮೇಶ್ವರ್. ಹಾಗೂ ಸಂಸದ ಕೇಂದ್ರ ಜಲಶಕ್ತಿ ಹಾಗೂ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ.ಮತ್ತು ಹಿರಿಯ ಕಲಾವಿದರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

     ನಾಟಕಗಳನ್ನು ನೋಡಲು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರುಈ ಸಂದರ್ಭದಲ್ಲಿ ನಾಟಕ ಅಕಾಡಮಿ ಸದಸ್ಯ ಪತ್ರಕರ್ತ ಉಗಮ ಶ್ರೀನಿವಾಸ್ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link