ಮೈಸೂರು:
ಸಮ್ಮಿಶ್ರ ಸರ್ಕಾರ ಉರುಳಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಿಜೆಪಿಗೆ ಹಾರಿ, ಸಚಿವ ಸಂಪುಟ ಸೇರಿದ್ದ 11 ಮಂದಿ ಬಂಡಾಯ ಶಾಸಕರ ಆಸ್ತಿಯಲ್ಲಿ ಭಾರೀ ಏರಿಕೆಯಾಗಿರುವುದು ಕಂಡು ಬಂದಿದೆ.
11 ಮಂದಿ ಬಂಡಾಯ ಶಾಸಕರ ಸ್ಥಿರಾಸ್ಥಿ ಹಾಗೂ ಚರಾಸ್ತಿಗಳಲ್ಲಿ ಭಾರೀ ಏರಿಕೆಗಳು ಕಂಡು ಬಂದಿದ್ದು, ಬಹುತೇಕ ನಾಯಕರು ಈ ಆಸ್ತಿಯನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ನೋಂದಾವಣಿ ಮಾಡಿಕೊಂಡಿರುವುದು ವರದಿಗಳಿಂದ ತಿಳಿದುಬಂದಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು 2018ರಲ್ಲಿ ಸ್ಪರ್ಧಿಸಿದಾಗ 1.11 ಕೋಟಿ ರೂ.ಗಳಷ್ಟಿದ್ದ ಚರ ಆಸ್ತಿ ಇದೀಗ ರೂ.2.79 ಕೋಟಿಗಳಷ್ಟಾಗಿದೆ. ಅದೇ ರೀತಿ 52,81,000 ರೂ.ಗಳಷ್ಟಿದ್ದ ಅವರ ಸ್ಥಿರಾಸ್ತಿ ಈಗ ರೂ.1,66,60,480 ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ