ತುಮಕೂರು:
ತುಮಕೂರು ಪಾಲಿಕೆಯ ಸದಸ್ಯರ ಕೂಪ ಮಂಡೂಕತನಕ್ಕೆ ಜ್ವಲಂತ ಸಾಕ್ಷಿ ಜಯನಗರ ಪಶ್ಚಿಮದ ರಸ್ತೆಗಳು. ಈ ವಾರ್ಡಿನ 8ನೆ ಅಡ್ಡರಸ್ತೆಯಲ್ಲಿ ಕಾಮನಬಿಲ್ಲಿನಂತೆ ಬಾಗಿರುವ ಮರದ ಕೊಂಬೆಗಳು ದ್ವಿಚಕ್ರ ವಾಹನದವರು ಕೂಡ ಚಲಿಸಲಾಗದಂತಹ ಪರಿಸ್ಥಿತಿ.
ಇನ್ನು ರಾತ್ರಿ ಹೊತ್ತು ಈ ರಸ್ತೆಯಲ್ಲಿ ತಿರುಗಾಡುವುದು ಯಮಪಾಶವನ್ನು ಹಾಕಿಕೊಂಡಂತೆಯೆ ಸರಿ. ಇಡೀ ರಸ್ತೆಯ ಎರಡೂ ಮಗ್ಗುಲಲ್ಲಿ ರಸ್ತೆಗೆ ಚಾಚಿಕೊಂಡಿರುವ ಮರಗಿಡಗಳ ಕೊಂಬೆಗಳನ್ನು ಶೀಘ್ರವಾಗಿ ತೆಗೆಯದಿದ್ದರೆ ಈ ರಸ್ತೆಯಲ್ಲಿ ಪ್ರಯಾಣಿಸುವ ಮಂದಿಗೆ ಮರಣ ಮೃದಂಗ ಬಾರಿಸಿದಂತೆ. ನಾಲ್ಕು ಚಕ್ರದ ವಾಹನಗಳು ಚಲಿಸಲು ಸಾಧ್ಯವೇ ಇಲ್ಲ.
ಮಾನವ ಸೈರಣೆಗೂ ಒಂದು ಮಾನದಂಡ ಹಾಗೂ ಮಿತಿ ಇದೆ ಎನ್ನುವುದನ್ನು ಮಹಾನಗರ ಪಾಲಿಕೆಯವರು ಅರ್ಥೈಸಿಕೊಂಡರೆ ಒಳ್ಳೆಯದು. ನಗರ ಶಾಸಕರು ಈ ವಾರ್ಡಿನ ಪಾಲಿಕಾ ಸದಸ್ಯರೊಂದಿಗೆ ಭೇಟಿ ಕೊಟ್ಟು ಖುದ್ದು ಪರಿಶೀಲನೆ ಮಾಡಿ ಸೂಕ್ತಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಇಲ್ಲಿನ ಆಗುಹೋಗುಗಳಿಗೆ ಮಹಾನಗರ ಪಾಲಿಕೆ ಹಾಗೂ ಶಾಸಕರು ನೇರ ಹೊಣೆ ಹೊರಬೇಕಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ