ನಾಲ್ಕು ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ

ರಾಜ್ಯ:

ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆಯ ಪ್ರಕಾರ ಕರ್ನಾಟಕದಲ್ಲಿ ಚುನಾವಣಾ ವರ್ಷ ಆರಂಭವಾಗಿದೆ. ಮುಂದಿನ ವರ್ಷದ ಮೇ ತಿಂಗಳೊಳಗೆ ಇಲ್ಲಿ ಅಸೆಂಬ್ಲಿ ಚುನಾವಣೆ ನಡೆಯಬೇಕಾಗಿದ್ದರೂ, ಅವಧಿಗೆ ಮುನ್ನ ಚುನಾವಣೆ ನಡೆಯುವ ಮಾತೂ ಕೇಳಿ ಬರುತ್ತಿದೆ.

ನಾವು ಈಗ ಚುನಾವಣೆ ಘೋಷಣೆಯಾದರೂ, ಎದುರಿಸಲು ಸಿದ್ದ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರೆ.

ಮೇಕೆದಾಟು ಪಾದಯಾತ್ರೆಗೆ ಸಿಕ್ಕ ಅಭೂತಪೂರ್ವ ಬೆಂಬಲದ ನಶೆಯಲ್ಲಿ ಕಾಂಗ್ರೆಸ್ ಇದೆ, ಆದರೆ, ಬಿಜೆಪಿ ಒಂದೊಂದೇ ಅಸ್ತ್ರವನ್ನು ಹೊರಬಿಡಲು ಆರಂಭಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

 ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ’

ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳುವ ಪ್ರಕಾರ, “ಚುನಾವಣಾ ವರ್ಷದಲ್ಲಿ ಕೋಮುಗಲಭೆ ಹಬ್ಬಿಸುವ ಭಾಗವಾಗಿ ಬಿಜೆಪಿ ವಾಮಮಾರ್ಗ ಬಳಸಿಕೊಳ್ಳಲು ಆರಂಭಿಸಿದೆ. ಜನಪರ ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೂ ಕೆಲ ಹರಕೆಯ ಕುರಿಗಳನ್ನು ಮುಂದೆ ಬಿಟ್ಟು ಧರ್ಮದ ಆಧಾರದ ಮೇಲೆ ಚುನಾವಣಾ ಗಲಭೆ ಎಬ್ಬಿಸಲು ಬಿಜೆಪಿ ಹೊರಟಿದೆ”ಎಂದು ಇವರು ಎಚ್ಚರಿಸಿದ್ದಾರೆ.

ಆದರೆ, ಮಹದೇವಪ್ಪನವರು ಕೊಡುತ್ತಿರುವ ಎಚ್ಚರಿಕೆ ರಾಜ್ಯದ ಜನತೆಗೋ ಅಥವಾ ಖುದ್ದು ತಮ್ಮ ಪಕ್ಷಕ್ಕೋ ಎನ್ನುವುದಿಲ್ಲಿ ಪ್ರಶ್ನೆ. ಯಾಕೆಂದರೆ, ಈಗಿರುವ ಮೂರು ವಿದ್ಯಮಾನಗಳ ಪೈಕಿ ಎರಡು ವಿಚಾರದಲ್ಲಿ ಕಾಂಗ್ರೆಸ್ ಖಚಿತ ನಿಲುವು ತಾಳಲು ಸಾಧ್ಯವಾಗದೇ ಇದ್ದದ್ದು. ಕಾಂಗ್ರೆಸ್ ಪಕ್ಷವನ್ನು ಸತತವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಬಿಜೆಪಿ, ಮುಂದೆ ಓದಿ..

ಅದರಲ್ಲಿ ಮೊದಲನೆಯದ್ದು, ಹಿಜಾಬ್ ವಿಚಾರ

 ಮೂರು ವಿಚಾರಗಳಲ್ಲಿ ಒಂದನ್ನು ಹೊರತು ಪಡಿಸಿ ಇನ್ನೆರಡು ವಿಚಾರದಲ್ಲಿ ಕಾಂಗ್ರೆಸ್ಸಿಗೆ ಸರ್ವಾನುಮತದಿಂದ ಕೂಡಿದ ನಿಲುವನ್ನು ತಾಳಲು ಸಾಧ್ಯವಾಗಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ. ಅದರಲ್ಲಿ ಮೊದಲನೆಯದ್ದು, ಹಿಜಾಬ್ ವಿಚಾರ.ಉಡುಪಿ ಶಾಲಾ ಕಾಲೇಜಿನ ಆಡಳಿತ ಮಂಡಳಿಯೇ ಬಗೆಹರಿಸಬಹುದಾಗಿದ್ದ ಸಮಸ್ಯೆ, ಹೈಕೋರ್ಟಿನಿಂದ ಸುಪ್ರೀಂ ಅಂಗಣಕ್ಕೆ ಹೋಗಿ ನಿಂತಿದೆ. ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವನ್ನು ಹೊಂದಿದ್ದರೂ, ಕಾಂಗ್ರೆಸ್ಸಿಗೆ ಇದು ಸರ್ವಾನುಮತದಿಂದ ಸಾಧ್ಯವಾಗಿಲ್ಲ. ಇದಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪೂ ಕಾರಣವಿದ್ದಿರಬಹುದು.

         ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಚಿತ್ರ

ಎರಡನೇ ವಿಚಾರವೆಂದರೆ, ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಚಿತ್ರ. ಈ ಚಿತ್ರ ಮತ್ತು ಚಿತ್ರದ ಕಥೆ ದೇಶಾದ್ಯಂತ ಭಾರೀ ಸುದ್ದಿಯಲ್ಲಿರುವುದು ಗೊತ್ತಿರುವ ವಿಚಾರ. ಬಿಜೆಪಿ ಅಧಿಕಾರದಲ್ಲಿರುವ ಸರಕಾರಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ಘೋಷಿಸಿತ್ತು.

ಇನ್ನು ಕರ್ನಾಟಕದಲ್ಲಂತೂ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶಾಸಕರನ್ನೆಲ್ಲಾ ಚಿತ್ರಮಂದಿರಕ್ಕೆ ಕರೆದೊಯ್ಯಲಾಯಿತು. ಈ ವಿಚಾರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದವರು ಮಾತ್ರ ಸ್ಪಷ್ಟ ನಿಲುವನ್ನು ಹೊಂದಿದ್ದರು. ಆದರೂ, ಬಿಜೆಪಿಯ ರಾಜಕೀಯ ಲೆಕ್ಕಾಚಾರವನ್ನು ಸೂಕ್ಷ್ಮವಾಗಿ ಕಾಂಗ್ರೆಸ್ ಗಮನಿಸುತ್ತಿದೆ.

ಬಂದೇ ಬಿಡ್ತು ತೂಫಾನ್​; ‘ಕೆಜಿಎಫ್​ ಚಾಪ್ಟರ್​ 2’ ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ

ಮೂರನೆ ವಿಚಾರವೇನಂದರೆ, ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ. ಈ ವಿಚಾರವನ್ನು ಬಿಜೆಪಿ ಸರಕಾರ ಮುನ್ನಲೆಗೆ ತರುವ ಮೂಲಕ ಅತ್ಯಂತ ಸ್ಪಷ್ಟವಾಗಿ ಕಾಂಗ್ರೆಸ್ ಅನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

ಧಾರ್ಮಿಕ ವಿಚಾರವಾಗಿರುವುದರಿಂದ ಹೇಳಿಕೆ ನೀಡುವಾಗ ಅಳೆದುತೂಗಿ ಮಾತನಾಡಬೇಕು ಎನ್ನುವ ಫರ್ಮಾನನ್ನು ಖುದ್ದಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನೀಡಿದ್ದಾರೆ. ಈ ವಿಚಾರದಲ್ಲಿ ಯಾವುದೇ ನಿಲುವು ತಾಳಿದರೂ, ಅದು ಬಿಜೆಪಿಗೆ ಲಾಭವಾಗುವ ಸಾಧ್ಯತೆ ಹೆಚ್ಚು ಎಂದು ರಾಜಕೀಯ ಪಂಡಿತರ ವಿಶ್ಲೇಷಿಸುತ್ತಿದ್ದಾರೆ.

ಮದರಸಾ ಶಿಕ್ಷಣದಿಂದಾಗಿ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಪದ್ಧತಿಯಿಂದ ದೂರವಾಗಬಾರದು

ನಾಲ್ಕನೇ ವಿಚಾರ, ಇನ್ನೂ ಮುನ್ನಲೆಗೆ ಬರಬೇಕಷ್ಟೇ, ಇಟ್ಸ್ ಎ ಮ್ಯಾಟರ್ ಆಫ್ ಟೈಂ. “ಮದರಸಾ ಶಿಕ್ಷಣದಿಂದಾಗಿ ಅಲ್ಪಸಂಖ್ಯಾತ ಮಕ್ಕಳು ಇವತ್ತಿನ ಶಿಕ್ಷಣ ಪದ್ಧತಿಯಿಂದ ದೂರ ಉಳಿಯಬಾರದು.

ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

ಹೀಗಾಗಿ ರಾಜ್ಯದ ಮದರಸಾಗಳನ್ನು ಶಿಕ್ಷಣ ಪದ್ಧತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ” ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ. ಆ ಮೂಲಕ, ಇನ್ನೊಂದು ವಿಚಾರವನ್ನು ಇಂದಲ್ಲದಿದ್ದರೆ ನಾಳೆ (ಖಂಡಿತ ಚುನಾವಣೆಗೆ ಮುನ್ನ) ಮುನ್ನಲೆಗೆ ತರುವ ಇಂಗಿತ ಸರಕಾರದ್ದು ಇದ್ದಂತಿದೆ. ಈ ಎಲ್ಲಾ ನಾಲ್ಕು ವಿಚಾರಗಳು ಧಾರ್ಮಿಕ ಸೂಕ್ಷ್ಮತೆಯ ವಿಚಾರಗಳು ಎನ್ನುವುದಿಲ್ಲಿ ಗಮನಿಸಬೇಕಾದ ವಿಚಾರ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link