ಲೀಕ್‌ ಆಯ್ತು ಮತ್ತೊಂದು ವೀಡಿಯೋ : ಬಾಲಿವುಡ್‌ ನಲ್ಲಿ ಸಂಚಲನ

ಮುಂಬಯಿ:

   ಕೆಲ ಸೆಲೆಬ್ರಿಟಿಗಳಿಗೆ ತಾವು ಸದಾ ಸುದ್ದಿಯಲ್ಲಿರಬೇಕೆನ್ನುವ ಒಂದು ರೀತಿಯ ಗೀಳು ಇರುತ್ತದೆ. ಪಬ್ಲಿಸಿಟಿಗಾಗಿ ಕೆಲವರು ಯಾವ ಹಂತಕ್ಕೆ ಬೇಕಾದರೂ ಹೋಗಿ ತಮ್ಮನ್ನು ತಾವು ಸುದ್ದಿಯಲ್ಲಿರಿಸುತ್ತಾರೆ.

   ಕಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ ವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ನಟಿಸಿರುವ ಊರ್ವಶಿ ರೌಟೆಲಾ  ಅವರು ಇತ್ತೀಚೆಗೆ ಚಿತ್ರೀಕರಣದ ಸಂದರ್ಭದಲ್ಲಿ ಕಾಲಿಗೆ ಏಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

   ಊರ್ವಶಿ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಚಿತ್ರರಂಗಕ್ಕೆ ಬಂದರೆ ಊರ್ವಶಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಐಟಂ ಸಾಂಗ್‌ ಗಳಲ್ಲೇ. ಸ್ಪೆಷೆಲ್‌ ಹಾಡುಗಳಲ್ಲಿ ಹೆಜ್ಜೆ ಹಾಕಿ ತನ್ನ ಮೈಮಾಟವನ್ನು ತೋರಿಸಿರುವ ನಟಿಯ ಖಾಸಗಿ ವಿಡಿಯೋವೊಂದು ಲೀಕ್‌ ಆಗಿದೆ ಎನ್ನಲಾಗುತ್ತಿದೆ. 

   ನಟಿ ಊರ್ವಶಿ ಅವರದ್ದು ಎನ್ನಲಾಗುತ್ತಿರುವ ಈ ವಿಡಿಯೋ ಕಳೆದ ಕೆಲ ಗಂಟೆಗಳಿಂದ ಸೋಶಿಯಲ್‌ ಮೀಡಿಯಾಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಸ್ನಾನಕ್ಕೆಂದು ಬಾತ್‌ ರೂಮ್‌ ಗೆ ಬರುತ್ತಾರೆ. ಕೈಯಲ್ಲಿದ್ದ ಟವೆಲ್ ಅನ್ನು ಹ್ಯಾಂಗರ್‌ಗೆ ನೇತುಹಾಕಿ ತಮ್ಮ ಬಟ್ಟೆ ತೆಗೆಯಲು ಮುಂದಾಗುತ್ತಾರೆ. ಆಗಲೇ ಆ ವಿಡಿಯೋ ಅಲ್ಲಿಗೆ ಮುಕ್ತಾಯವಾಗುತ್ತದೆ.

   ಈ ವಿಡಿಯೋವನ್ನು ನಟಿ ಊರ್ವಶಿ ಅವರ ಖಾಸಗಿ ವಿಡಿಯೋವೆಂದು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಇದನ್ನು ನಟಿ ಊರ್ವಶಿ ಅವರೇ ಪ್ರಚಾರಕ್ಕಾಗಿ ತಾವೇ ಮಾಡಿದ್ದಾರೆ. ಇದೊಂದು ಪಬ್ಲಿಸಿಟಿ ಸ್ಟಂಟ್‌ ಎಂದು ಕೆಲವರು ವಾದಿಸುತ್ತಿದ್ದಾರೆ. ಅಲ್ಲದೆ ಇದು ನಟಿ ಊರ್ವಶಿ ಅವರ ಡೀಪ್‌ ಫೇಕ್‌ ವಿಡಿಯೋವೆಂದು ಕೂಡ ಹೇಳಲಾಗುತ್ತಿದೆ. ಊರ್ವಶಿ ಸದಾ ಟ್ರೆಂಡ್‌ ಅಲ್ಲಿ ಇರಲು ಬಯಸುವ ಬಿಟೌನ್‌ ನಟಿಯರಲ್ಲಿ ಒಬ್ಬರು. ಈ ಹಿಂದೆ ರಿಷಭ್‌ ಪಂತ್‌ ಅವರ ಬಗ್ಗೆ ಕೆಲ ಮಾತುಗಳನ್ನು ಹೇಳಿ ಅವರು ಸುದ್ದಿಯಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap