ಮುಗಿತು ಚುನಾವಾಣೆ : ಗೆಲುವಿಗಾಗಿ ದೇವರ ಮೊರೆ ಹೋದ ಅಭ್ಯರ್ಥಿಗಳು ….!

ಬೆಂಗಳೂರು :

     ಲೋಕಸಭೆ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ಮತ್ತು ಅವರ ಹಿಂಬಾಲಕರು ಗೆಲುವಿಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.

     ಅವಿಭಜಿತ ಬಳ್ಳಾರಿ ಜಿಲ್ಲೆಯ ಸುಪ್ರಸಿದ್ಧ ದೇವಸ್ಥಾನಗಳಾದ ಮೈಲಾರಲಿಂಗೇಶ್ವರ, ಕುರುಗೋಡು ಬಸವಣ್ಣ, ಬಳ್ಳಾರಿ ಕನಕ ದುರ್ಗಮ್ಮ ಮತ್ತಿತರ ದೇವಸ್ಥಾನಗಳಿಗೆ ರಾಜಕಾರಣಿಗಳು ಮತ್ತು ಅವರ ಆಪ್ತರು ಭೇಟಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಇ ತುಕಾರಾಂ ಅವರ ಭವಿಷ್ಯವನ್ನು ಮೇ 6 ರಂದು ನಿರ್ಧಾರವಾಗಿದ್ದು, ಜೂನ್ 4 ರಂದು ಫಲಿತಾಂಶ ಬಹಿರಂಗಗೊಳ್ಳಳಿದೆ.

    ಬಳ್ಳಾರಿಯ ಬಿಜೆಪಿ ಹಿರಿಯ ಮುಖಂಡ ನಾರಾಯಣರಾವ್ ಮಾತನಾಡಿ, ಇತ್ತೀಚೆಗಷ್ಟೇ ನಾನು ಮತ್ತು ನನ್ನ ಅನುಯಾಯಿಗಳು ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀರಾಮುಲು ಗೆಲುವಿಗಾಗಿ ಪ್ರಾರ್ಥಿಸಿದ್ದೆವು. ಗೆದ್ದರೆ 5,001 ತೆಂಗಿನಕಾಯಿ ಅರ್ಪಿಸುತ್ತೇನೆ ಎಂದು ಹರಕೆ ಹೊತ್ತಿದ್ದೇನೆ. ಕ್ಷೇತ್ರದಲ್ಲಿ ಸುಮಾರು ಶೇ.73ರಷ್ಟು ಮತದಾನವಾಗಿದೆ. ಹೆಚ್ಚಿನ ಮತದಾರರ ಶೇಕಡಾವಾರು ಯಾವಾಗಲೂ ಬಿಜೆಪಿಗೆ ಸಹಾಯ ಮಾಡಿದೆ. ಜೂನ್ 4 ರಂದು ಬಿಜೆಪಿ ದೇಶಾದ್ಯಂತ ಮತ್ತು ಬಳ್ಳಾರಿಯಲ್ಲಿ ಸಂಭ್ರಮಾಚರಣೆ ನಡೆಸಲಿದೆ ಎಂಬ ವಿಶ್ವಾಸವಿದೆ ಎಂದ ಹೇಳಿದ್ದಾರೆ.

     ಬಳ್ಳಾರಿ ಕಾಂಗ್ರೆಸ್ ಮುಖಂಡ ನಾಗರಾಜರೆಡ್ಡಿ ಮಾತನಾಡಿ, ನಮ್ಮ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ನಾವು ಯಾವುದೇ ಧರ್ಮದ ವಿರುದ್ಧ ಇಲ್ಲ. ತುಕಾರಾಂ ಗೆಲುವಿಗಾಗಿ ನಮ್ಮ ಪಕ್ಷದ ಲಕ್ಷಾಂತರ ಅನುಯಾಯಿಗಳು ಮತ್ತು ನಾನು ಮೈಲಾರಲಿಂಗೇಶ್ವರ ದೇವರ ಮುಂದೆ ಪ್ರಾರ್ಥಿಸಿದ್ದೇವೆ. ತುಕಾರಾಂ ಅವರು ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಗೆದ್ದರೆ ನನ್ನ ತಂಡದಿಂದ ದೇವಸ್ಥಾನದ ಅಭಿವೃದ್ಧಿಗೆ 5 ಲಕ್ಷ ರೂ. ನೀಡುತ್ತೇನೆ. ಜೂನ್ 4 ರಂದು ನಾವು ತುಕಾರಾಂ ವಿಜಯವನ್ನು ಆಚರಿಸುತ್ತೇವೆಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap